ಕರ್ನಾಟಕ

karnataka

ETV Bharat / state

ಸರ್ಕಾರಿ ಕಾಲೇಜಿನಲ್ಲಿ ದುರಸ್ಥಿ ಕಾರ್ಯದ ಅವ್ಯವಸ್ಥೆ ಕಂಡು ಸಿಡಿಮಿಡಿಗೊಂಡ ಶಾಸಕ - Gangavati MLA Paranna Munavalli

ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಸರ್ಕಾರಿ ಜ್ಯೂನಿಯರ್ ಕಾಲೇಜಿನ ದುರಸ್ಥಿ ಕಾರ್ಯದಲ್ಲಿ ಲೋಪವಾಗಿರುವುದನ್ನು ತಿಳಿದ ಶಾಸಕ ಪರಣ್ಣ ಮುನವಳ್ಳಿ, ಸಂಬಂಧಪಟ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

Paranna munavalli
ಶಾಸಕ ಪರಣ್ಣ ಮುನವಳ್ಳಿ

By

Published : May 30, 2020, 8:10 PM IST

ಗಂಗಾವತಿ (ಕೊಪ್ಪಳ):ತಾಲೂಕಿನ ಸರ್ಕಾರಿ ಜ್ಯೂನಿಯರ್ ಕಾಲೇಜಿನಲ್ಲಿ 32 ಲಕ್ಷ ರೂಪಾಯಿ ಮೊತ್ತದಲ್ಲಿ ಕೈಗೊಳ್ಳಲಾಗಿರುವ ದುರಸ್ಥಿ ಕಾರ್ಯ ಅವ್ಯವಸ್ಥೆಯಿಂದ ಕೂಡಿದೆ ಎಂಬ ದೂರಿನ ಹಿನ್ನೆಲೆ ಶಾಸಕ ಪರಣ್ಣ ಮುನವಳ್ಳಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ಪರಣ್ಣ ಮುನವಳ್ಳಿ

ಬಹಳ ದಿನಗಳ ಹಿಂದೆ ಶಾಲೆಯ ಕಟ್ಟಡದ ಮೇಲ್ಭಾಗವನ್ನು ಕಿತ್ತು ಕಾಂಕ್ರೀಟ್ ಹಾಕಿ ರಿಪೇರಿ ಮಾಡಲಾಗಿತ್ತು. ಆದರೆ ಮತ್ತೆ ಆ ಭಾಗದಿಂದ ನೀರು ಸೋರುತ್ತಿರುವುದನ್ನು ಗಮನಿಸಿದ ಶಾಸಕ ಕೂಡಲೇ ದೂರವಾಣಿ ಮೂಲಕ ಜಿಲ್ಲಾ ಪಂಚಾಯ್ತಿ ಜೆಇ ಪಲ್ಲವಿ ಅವರಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡರು. ಗುತ್ತಿಗೆದಾರರನ್ನು ಕರೆಸಿ ಎಲ್ಲಾ ದುರಸ್ಥಿ ಮಾಡಿದ ಬಳಿಕವೇ ಬಿಲ್ ಮಂಜೂರು ಮಾಡಿ ಎಂದು ತಾಕೀತು ಮಾಡಿದರು. ಇನ್ನು ದುರಸ್ಥಿ ಮಾಡುವ ವೇಳೆ ಶಾಲೆಯ ಕಿಟಕಿ, ಬಾಗಿಲು ಮುರಿದಿವೆ ಎಂದು ಶಾಲೆಯ ಪ್ರಭಾರಿ ಪ್ರಾಂಶುಪಾಲ ರಂಗಸ್ವಾಮಿ ಶಾಸಕರ ಬಳಿ ದೂರಿದರು.

ABOUT THE AUTHOR

...view details