ಕೊಪ್ಪಳ: ಜಿಲ್ಲೆಯ ಯಲಬುರ್ಗಾ ತಾಲೂಕಿನ ಕುದ್ರಿಕೊಟಗಿ ಗ್ರಾಮದ ಹೊರವಲಯದ ನೀರಿನ ಹೊಂಡದಲ್ಲಿ, ಕಾಣೆಯಾಗಿದ್ದ ಯುವಕನ ಶವ ಪತ್ತೆಯಾಗಿದೆ.
ಕೊಪ್ಪಳ: ಕಾಣೆಯಾಗಿದ್ದ ಯುವಕ ಶವವಾಗಿ ಪತ್ತೆ - ಕೊಪ್ಪಳದಲ್ಲಿ ಶವವಾಗಿ ಪತ್ತೆಯಾದ ಯುವಕ
ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಕುದ್ರಿಕೊಟಗಿ ಗ್ರಾಮದ ಹೊರವಲಯದ ಹೊಂಡದಲ್ಲಿ, ಕಾಣೆಯಾಗಿದ್ದ ಯುವಕ ಗುರುರಾಜ ಶವವಾಗಿ ಪತ್ತೆಯಾಗಿದ್ದಾನೆ. ಅಸಹ ಸಾವು ಎಂದು ಮೃತನ ತಾಯಿ ಹಾಗೂ ಸಂಬಂಧಿಕರು ತನಿಖೆಗೆ ಆಗ್ರಹಿಸಿದ್ದಾರೆ.
ಶವವಾಗಿ ಪತ್ತೆಯಾದ ಗುರುರಾಜ್
ಕುದ್ರಿಕೊಟಗಿ ಗ್ರಾಮದ ನಿವಾಸಿ ಗುರುರಾಜ್ ಬಸವರಾಜ ದಗ್ಲಿ (25) ಎಂಬ ಯುವಕ ಐದು ದಿನಗಳಿಂದ ಕಾಣೆಯಾಗಿದ್ದ. ಈ ಸಾವು ಅಸಹಜ ಎಂದು ಮೃತನ ತಾಯಿ ಹಾಗೂ ಸಂಬಂಧಿಕರು ತನಿಖೆಗೆ ಆಗ್ರಹಿಸಿದ್ದಾರೆ.
ಸ್ಥಳಕ್ಕೆ ಯಲಬುರ್ಗಾ ಪೊಲೀಸರು ಭೇಟಿ ನೀಡಿದ್ದಾರೆ. ಪರಿಶೀಲನೆ ನಡೆಸುತ್ತಿದ್ದು, ಪ್ರಕರಣ ದಾಖಲಿಸಿಲಾಗಿದೆ.