ಕೊಪ್ಪಳ:ನೆರೆಮನೆಯ ಮಹಿಳೆಯರು ಮತ್ತು ಮಕ್ಕಳ ಜೊತೆಗೆ ಕಾಮದಾಟವಾಡಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಶಿಕ್ಷಕನೋರ್ವನ ವಿರುದ್ಧ ಎಫ್ಐಆರ್ ದಾಖಲಾಗಿದೆ. ಜಿಲ್ಲೆಯ ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಹಿಳೆಯರು ಮತ್ತು ಮಕ್ಕಳ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದ ಆರೋಪಿ ಶಿಕ್ಷಕ ಅಜರುದ್ದೀನ್ ಎಂಬಾತ ತಲೆಮರೆಸಿಕೊಂಡಿದ್ದಾರೆ.
ಮಕ್ಕಳು-ಮಹಿಳೆಯರ ಜೊತೆ ಕೊಪ್ಪಳ ಶಿಕ್ಷಕನ ಕಾಮದಾಟದ ವಿಡಿಯೋ ವೈರಲ್.. ಟೀಚರ್ ಎಸ್ಕೇಪ್ - ಕೊಪ್ಪಳ ಶಿಕ್ಷಕನ ಕಾಮದಾಟದ ವಿಡಿಯೋ
ಪಾಠದ ನೆಪದಲ್ಲಿ ಮಕ್ಕಳು ಮತ್ತು ನೆರೆಮನೆಯ ಮಹಿಳೆಯರನ್ನು ತನ್ನ ಮನೆಗೆ ಕರೆಸಿಕೊಳ್ಳುತ್ತಿದ್ದ ಶಿಕ್ಷಕನೋರ್ವ ಮಾಡಬಾರದ್ದನ್ನು ಮಾಡಿರುವ ಆರೋಪ ಕೇಳಿಬಂದಿದೆ.
ರಾಯಚೂರು ಜಿಲ್ಲೆಯ ಸಿಂಧನೂರ ತಾಲೂಕಿನ ಸಿಂಗಾಪೂರ ಗ್ರಾಮದ ಶಿಕ್ಷಕ ಅಜರುದ್ದೀನ್ ನೆರೆಮನೆಯ ಮಹಿಳೆಯರು ಮತ್ತು ಮಕ್ಕಳನ್ನ ಕಾಮದಾಟಕ್ಕೆ ಬಳಸಿಕೊಂಡಿದ್ದ ಎನ್ನುವ ವಿಡಿಯೋ ವೈರಲ್ ಆಗಿದ್ದವು. ಸದ್ಯ ಅಜರುದ್ದೀನ್ ವಿರುದ್ಧ ವಿಡಿಯೋದಲ್ಲಿರುವ ಮಹಿಳೆಯೇ ಇದೀಗ ದೂರು ನೀಡಿದ್ದಾರೆ.
ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವುದಾಗಿ ಹೇಳಿ ಮಹಿಳೆಯನ್ನು ಪರಿಚಯ ಮಾಡಿಕೊಂಡಿದ್ದ ಅಜರುದ್ದೀನ್ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಬಳಿಕ ನೀನು ಸಹಕರಿಸದಿದ್ದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡೋದಾಗಿ ಶಿಕ್ಷಕ ಬೆದರಿಕೆ ಹಾಕಿದ್ದರು. ಅವರೊಂದಿಗೆ ಲೈಂಗಿಕ ಸಂಪರ್ಕ ಬೆಳೆಸದೇ ಹೋದ್ರೆ ನನ್ನನ್ನು ಸಾಯಿಸುವುದಾಗಿ ಬೆದರಿಕೆ ಕೂಡ ಹಾಕಿದ್ದರು ಎಂದು ದೂರು ಪ್ರತಿಯಲ್ಲಿ ನೊಂದ ಮಹಿಳೆಯೊಬ್ಬರು ಉಲ್ಲೇಖಿಸಿದ್ದಾರೆ. ಶಿಕ್ಷಕ ಅಜರುದ್ದೀನ್ ವಿರುದ್ಧ ಐಪಿಸಿ ಸೆಕ್ಷನ್ 376, 354, 323, 504, 506 ರಡಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.