ಕರ್ನಾಟಕ

karnataka

ETV Bharat / state

ಅಪ್ರಾಪ್ತನಿಂದ ಅಪ್ರಾಪ್ತೆಯ ಮೇಲೆ ಅತ್ಯಾಚಾರ: ದೂರು ದಾಖಲು - ಕೊಪ್ಪಳದಲ್ಲಿ ಅಪ್ರಾಪ್ತ ಯುವತಿಯ ಮೇಲೆ ಅತ್ಯಾಚಾರ

ಮದುವೆ ಆಗುವುದಾಗಿ ಹೇಳಿ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಅತ್ಯಾಚಾರ ಮಾಡಿದ್ದಾನೆ ಎಂದು ಸಂತ್ರಸ್ತೆ ದೂರು ದಾಖಲಿಸಿದ್ದಾಳೆ.

minor girl was raped in Koppal
ಅಪ್ರಾಪ್ತನಿಂದ ಅಪ್ತಾಪ್ತೆಯ ಮೇಲೆ ಅತ್ಯಾಚಾರ

By

Published : Dec 11, 2022, 2:17 PM IST

Updated : Dec 11, 2022, 2:23 PM IST

ಗಂಗಾವತಿ(ಕೊಪ್ಪಳ):ಅಪ್ರಾಪ್ತನೊಬ್ಬ ಪ್ರೀತಿಯ ನೆಪದಲ್ಲಿ ಹಾಗೂ ಮದುವೆಯಾಗುವ ನಂಬಿಕೆ ಹುಟ್ಟಿಸಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಕಾರಟಗಿ ತಾಲ್ಲೂಕಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮನಗರದ ಹದಿನೇಳು ವರ್ಷದ ಹುಡುಗನ ಮೇಲೆ ಬಾಲಕಿ ಕಾರಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ಆತ ಸಲುಗೆಯಿಂದಿದ್ದು ಆಗಾಗ ನಮ್ಮ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮಾತನಾಡಿಸುವುದು, ಮನೆಗೆ ಬರುವುದು ಮಾಡುತ್ತಿದ್ದ. ನಿನಗೆ 18 ನನಗೆ 21 ವರ್ಷವಾದ ಮೇಲೆ ಮದುವೆಯಾಗೋಣ ಎಂದು ನಂಬಿಸಿದ್ದಾನೆ. 8-9 ತಿಂಗಳ ಹಿಂದೆ ಮನೆಯಲ್ಲಿ ಯಾರೂ ಇಲ್ಲದೇ ಇದ್ದಾಗ ಮನೆಗೆ ಬಂದು ಬೇಡ ಎಂದರೂ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾಳೆ.

ಇದನ್ನೂ ಓದಿ:ಮಂಗಳೂರು: ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ, ಆರೋಪಿ ಖುಲಾಸೆ

Last Updated : Dec 11, 2022, 2:23 PM IST

ABOUT THE AUTHOR

...view details