ಗಂಗಾವತಿ:ನಗರದ ಹೊರವಲಯದಲ್ಲಿರುವ ಮಿನಿ ವಿಧಾನಸೌಧವನ್ನು ಜನರ ಅನುಕೂಲಕ್ಕಾಗಿ ಮತ್ತೆ ನಗರದೊಳಕ್ಕೆ ತರಲು ಯತ್ನಿಸಲಾಗುತ್ತಿದೆ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದ್ದಾರೆ.
ಮಿನಿ ವಿಧಾನಸೌಧ ಸ್ಥಳಾಂತರಕ್ಕೆ ಪ್ರಯತ್ನಿಸುವೆ: ಶಾಸಕ ಪರಣ್ಣ ಮುನವಳ್ಳಿ - koppal news
ಜನರಿಗೆ ಅಗತ್ಯವಾಗಿರುವ ಕಂದಾಯ ವ್ಯಾಪ್ತಿಯ ನಾನಾ ಇಲಾಖೆಯ ಸೇವೆ ಪಡೆಯಲು ಜನರು ಮೂರು-ನಾಲ್ಕು ಕಿಲೋ ಮೀಟರ್ ದೂರಕ್ಕೆ ಹೋಗಬೇಕಾದ ಸ್ಥಿತಿ ಇದೆ. ಹೀಗಾಗಿ ಮಿನಿ ವಿಧಾನಸೌಧವನ್ನು ನಗರದೊಳಗೆ ತರಲು ಯತ್ನಿಸುವೆ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದ್ದಾರೆ.
minividhansoudha-will-shift-to-city-soon-mla-said
ಬುಧವಾರ ವಿವಿಧ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ನ್ಯಾಯಾಲಯ, ಆಸ್ಪತ್ರೆ, ಪೊಲೀಸ್ ಠಾಣೆ, ನಗರಸಭೆ, ಲೋಕೋಪಯೋಗಿ ಇಲಾಖೆ, ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಸೇರಿದಂತೆ ಬಹುತೇಕ ಇಲಾಖೆಗಳು ನಗರದಲ್ಲಿವೆ. ಆದರೆ, ಜನರಿಗೆ ಅಗತ್ಯವಾಗಿರುವ ಕಂದಾಯ ವ್ಯಾಪ್ತಿಯ ನಾನಾ ಇಲಾಖೆಯ ಸೇವೆ ಪಡೆಯಲು ಜನರು ಮೂರು-ನಾಲ್ಕು ಕಿ.ಮೀ ದೂರಕ್ಕೆ ಹೋಗಬೇಕಾದ ಸ್ಥಿತಿ ಇದೆ. ಹೀಗಾಗಿ ಅತಿ ಶೀಘ್ರದಲ್ಲಿಯೇ ಮಿನಿ ವಿಧಾನಸೌಧವನ್ನು ನಗರದೊಳಗೆ ತರುವ ಯತ್ನ ಮಾಡಲಾಗುವುದು ಎಂದರು.