ಕುಷ್ಟಗಿ(ಕೊಪ್ಪಳ):ಪದೇಪದೆ ಗಡಿ ತಂಟೆ ಮಾಡುವ ಕೆಲ ಮರಾಠಿಗರು ತಮ್ಮ ಬೇಳೆ ಬೇಯಿಸಿಕೊಳ್ಳದಂತೆ ನಿಯಂತ್ರಣದಲ್ಲಿಡಲು ಮರಾಠಿ ಅಭಿವೃದ್ಧಿ ಪ್ರಾಧಿಕಾರವನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.
ಮರಾಠಿಗರನ್ನು ನಿಯಂತ್ರಣದಲ್ಲಿಡಲು ಮರಾಠಿ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಲಾಗಿದೆ: ಸಚಿವ ಸೋಮಣ್ಣ
ಗಡಿ ಭಾಗದಲ್ಲಿ ಮರಾಠಿಗರನ್ನು ಒಂದು ಹಂತಕ್ಕೆ ತರಲು, ಅವರು ಸಹ ಕನ್ನಡ ಶಾಲೆಯಲ್ಲಿ ಕಲಿಯುವಂತಾಗಲು ಹಾಗೂ ಇತರೇ ಸರ್ಕಾರದ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಲಿದೆ..
ಮಸ್ಕಿ ವಿಧಾನಸಭಾ ಕ್ಷೇತ್ರದ ಚುನಾವಣೆಯ ಹಿನ್ನೆಲೆ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಬೆಂಗಳೂರು ತೆರಳುವ ಮಾರ್ಗದಲ್ಲಿ ಬಿಜೆಪಿ ಕಾರ್ಯಕರ್ತರ ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಗಡಿ ಭಾಗದಲ್ಲಿ ಮರಾಠಿಗರನ್ನು ಒಂದು ಹಂತಕ್ಕೆ ತರಲು, ಅವರು ಸಹ ಕನ್ನಡ ಶಾಲೆಯಲ್ಲಿ ಕಲಿಯುವಂತಾಗಲು ಹಾಗೂ ಇತರೇ ಸರ್ಕಾರದ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಲಿದೆ.
ರಾಜ್ಯ, ದೇಶದೆಲ್ಲೆಡೆ ಇರುವ ಮರಾಠಿಗರು ಮುಖ್ಯವಾಹಿನಿಗೆ ಬರುವಂತಾಗಲು ಮರಾಠಿ ಅಭಿವೃದ್ಧಿ ಪ್ರಾಧಿಕಾರ ರಚಿಸಲಾಗಿದೆ ಎಂದು ಸಮರ್ಥಿಸಿಕೊಂಡರು. ಇದೇ ವೇಳೆ ಬಿಜೆಪಿ ಅಧ್ಯಕ್ಷ ದೊಡ್ಡನಗೌಡ ಪಾಟೀಲ, ಜಿ.ಪಂ.ಸದಸ್ಯ ಕೆ.ಮಹೇಶ, ಎಪಿಎಂಸಿ ಅಧ್ಯಕ್ಷ ಶಂಕ್ರಗೌಡ ಪಾಟೀಲ, ಪುರಸಭೆ ಅಧ್ಯಕ್ಷ ಗಂಗಾಧರಸ್ವಾಮಿ ಹಿರೇಮಠ ಮತ್ತಿತರರಿದ್ದರು.