ಕರ್ನಾಟಕ

karnataka

ETV Bharat / state

ಕೊಪ್ಪಳ: ಸಚಿವ ಶ್ರೀರಾಮುಲು ಹೆಗಲೇರಿದ ವಾನರ - Koppal

ವಾನರಗಳೊಂದಿಗೆ ಕೆಲ ಸಮಯ ಕಾಲಕಳೆದಿದ್ದು ನನ್ನ ಜೀವನದ ಅವಿಸ್ಮರಣಿಯ ಘಟನೆ ಎಂದು ಸಚಿವ ಬಿ. ಶ್ರೀರಾಮುಲು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಶ್ರೀರಾಮುಲು ಹೆಗಲ ಮೇಲೆ ವಾನರ ಕುಳಿತ ಫೋಟೋ ವೈರಲ್ ಆಗಿವೆ..

Minister sriramulu Time Spends With monkeys
ಸಚಿವ ಶ್ರೀರಾಮುಲು ಹೆಗಲೇರಿದ ವಾನರ

By

Published : Oct 27, 2021, 2:46 PM IST

ಕೊಪ್ಪಳ :ಸಾರಿಗೆ ಸಚಿವ ಶ್ರೀರಾಮುಲು ಇಂದು ಜಿಲ್ಲೆಯ ಪಂಪ ಸರೋವರಕ್ಕೆ ಭೇಟಿ ನೀಡಿದರು. ಈ ವೇಳೆ ಅವರು ಕೆಲಕಾಲ ಕೋತಿಗಳೊಂದಿಗೆ ಕಾಲ ಕಳೆದಿದ್ದಾರೆ.

ವಾನರ ಸೈನ್ಯದೊಂದಿಗೆ ಕಾಲಕಳೆದ ಸಾರಿಗೆ ಸಚಿವ ಶ್ರೀರಾಮುಲು

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕಿಷ್ಕಿಂಧಾ ಪ್ರದೇಶದ ಪಂಪಾ ಸರೋವರಕ್ಕೆ ಸಚಿವ ಬಿ. ಶ್ರೀರಾಮುಲು ಭೇಟಿ ನೀಡಿ, ಅಲ್ಲಿನ ದೇವಸ್ಥಾನದಲ್ಲಿ ದರ್ಶನ ಮುಗಿಸಿಕೊಂಡು ಹೊರ ಬಂದಾಗ ಹತ್ತಾರು ಮಂಗಗಳಿಗೆ ಬಾಳೆ ಹಣ್ಣು ನೀಡಿದರು.

ವಾನರ ಸೈನ್ಯದೊಂದಿಗೆ ಕಾಲಕಳೆದ ಸಾರಿಗೆ ಸಚಿವ ಶ್ರೀರಾಮುಲು

ಬಾಳೆ ಹಣ್ಣು ನೀಡುತ್ತಿದ್ದಂತೆ ಆಪ್ತವಾಗಿ ಬೆರೆತು ಕೆಲವೊಂದು ಮಂಗಗಳು ಸಚಿವರ ಹೆಗಲೇರಿದವು. ವಾನರಗಳು ಹೆಗಲೇರಿದರೂ ಸಹ ಸಚಿವ ಶ್ರೀರಾಮುಲು ಅವರು ಆ ಮಂಗಗಳಿಗೆ ಬಾಳೆಹಣ್ಣು ನೀಡಿ ಕೆಲಕಾಲ ಅವುಗಳೊಂದಿಗೆ ಕಾಲ ಕಳೆದಿದ್ದಾರೆ.

ವಾನರ ಸೈನ್ಯದೊಂದಿಗೆ ಕಾಲಕಳೆದ ಸಾರಿಗೆ ಸಚಿವ ಶ್ರೀರಾಮುಲು

ವಾನರಗಳೊಂದಿಗೆ ಕೆಲ ಸಮಯ ಕಾಲಕಳೆದಿದ್ದು ನನ್ನ ಜೀವನದ ಅವಿಸ್ಮರಣಿಯ ಘಟನೆ ಎಂದು ಸಚಿವ ಬಿ. ಶ್ರೀರಾಮುಲು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಶ್ರೀರಾಮುಲು ಹೆಗಲ ಮೇಲೆ ವಾನರ ಕುಳಿತ ಫೋಟೋ ವೈರಲ್ ಆಗಿವೆ.

ABOUT THE AUTHOR

...view details