ಗಂಗಾವತಿ: ತುಂಗಭದ್ರಾ ಎಡದಂಡೆ ಕಾಲುವೆಯ ಎಡ ಮತ್ತು ಬಲ ದಂಡೆಗಳ ಬಲಪಡಿಸುವಿಕೆಯ ಕಾಮಗಾರಿ ಸಿ ಸಿ ಲೈನಿಂಗ್ ಮತ್ತು ಆಧುನೀಕರಣ ಕಾಮಗಾರಿಗೆ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಭೂಮಿ ಪೂಜೆ ನೆರವೇರಿಸಿದರು.
ತುಂಗಭದ್ರಾ ಎಡದಂಡೆ ಕಾಲುವೆಯ ಕಾಮಗಾರಿಗೆ ಸಚಿವ ರಮೇಶ್ ಜಾರಕಿಹೊಳಿ ಚಾಲನೆ - Gangavathi latest news
ತುಂಗಭದ್ರಾ ಎಡದಂಡೆ ಕಾಲುವೆಯ ಎಡ ಮತ್ತು ಬಲ ದಂಡೆಗಳ ಬಲಪಡಿಸುವಿಕೆಯ ಕಾಮಗಾರಿಯನ್ನು ಒಂದು ವರ್ಷದ ಅವಧಿಯಲ್ಲಿ ಮುಗಿಸುವಂತೆ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಸೂಚಿಸಿದ್ದಾರೆ.
ರಮೇಶ ಜಾರಕಿಹೊಳಿ
ನೀರಾವರಿ ಇಲಾಖೆಯ ನಾಲೆಗಳ ಆಧುನೀಕರಣ ಹಾಗೂ ಕೃಷಿ ಸಶಕ್ತಿಕರಣ ಯೋಜನೆಯಡಿ ತಾಲೂಕಿನ ದಾಸನಾಳ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಕಾಮಗಾರಿಗೆ ಚಾಲನೆ ನೀಡಿದರು.
63 ಕೋಟಿ ರೂಪಾಯಿ ವೆಚ್ಚದ ಈ ಕಾಮಗಾರಿಯಲ್ಲಿ ಎಡದಂಡೆಯ ಜಿರೋ ಮೈಲ್ ದಿಂದ 47 ಕಿ.ಮೀ ವರೆಗೂ ಅಲ್ಲಲ್ಲಿ ಸಿಸಿ ಲೈನಿಂಗ್ ಮಾಡುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಒಂದು ವರ್ಷದ ಅವಧಿಯಲ್ಲಿ ಕಾಮಗಾರಿ ಮುಗಿಸುವಂತೆ ಈ ಸಂದರ್ಭದಲ್ಲಿ ಸೂಚನೆ ನೀಡಿದ ಸಚಿವರು, ಯಾವ ಕಾರಣಕ್ಕೂ ಗುಣಮಟ್ಟದ ವಿಷಯದಲ್ಲಿ ರಾಜಿ ಇಲ್ಲ ಎಂದು ಸ್ಪಷ್ಟಪಡಿಸಿದರು.