ಕರ್ನಾಟಕ

karnataka

ETV Bharat / state

ಸಾಮಾಜಿಕ ಅಂತರ ಮರೆತು ಸಚಿವರನ್ನ ಸ್ವಾಗತಿಸಿದ ಕಾರ್ಯಕರ್ತರು - ಕೊಪ್ಪಳಕ್ಕೆ ಸಚಿವ ಕೆ.ಎಸ್​ ಈಶ್ವರಪ್ಪ ಭೇಟಿ,

ಸಚಿವ ಈಶ್ವರಪ್ಪ ಆಗಮಿಸುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಸಾಮಾಜಿಕ ಅಂತರ ಮರೆತು ಸ್ವಾಗತಿಸಿದ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನಲ್ಲಿ ನಡೆದಿದೆ.

Minister KS Eshwarappa visit, Minister KS Eshwarappa visit to Koppal, Minister KS Eshwarappa news, ಸಚಿವ ಕೆ.ಎಸ್​ ಈಶ್ವರಪ್ಪ ಭೇಟಿ, ಕೊಪ್ಪಳಕ್ಕೆ ಸಚಿವ ಕೆ.ಎಸ್​ ಈಶ್ವರಪ್ಪ ಭೇಟಿ, ಸಚಿವ ಕೆ.ಎಸ್​ ಈಶ್ವರಪ್ಪ ಸುದ್ದಿ,
ಸಾಮಾಜಿಕ ಅಂತರ ಮರೆತು ಸಚಿವರನ್ನು ಸ್ವಾಗತಿಸಿದ ಕಾರ್ಯಕರ್ತರು

By

Published : Jun 6, 2020, 7:30 AM IST

ಕುಷ್ಟಗಿ (ಕೊಪ್ಪಳ): ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರು ಕುಷ್ಟಗಿಯ ಸರ್ಕ್ಯೂಟ್ ಹೌಸ್​​ಗೆ ಶುಕ್ರವಾರ ಸಂಜೆ ಆಗಮಿಸಿದ ಸಂದರ್ಭದಲ್ಲಿ ಸಾಮಾಜಿಕ ಅಂತರ ಮರೆತು ಬರಮಾಡಿಕೊಂಡರು.

ಸಾಮಾಜಿಕ ಅಂತರ ಮರೆತು ಸಚಿವರನ್ನು ಸ್ವಾಗತಿಸಿದ ಕಾರ್ಯಕರ್ತರು

ಸರ್ಕ್ಯೂಟ್ ಹೌಸ ಮುಂಭಾಗದಲ್ಲಿ ಕೊಪ್ಪಳ ಸಂಸದ ಕರಡಿ ಸಂಗಣ್ಣ, ಶಾಸಕರಾದ ಹಾಲಪ್ಪ ಆಚಾರ್, ಬಸವರಾಜ್ ದಡೇಸುಗೂರು, ಮಾಜಿ ಶಾಸಕ ಬಿಜೆಪಿ ಅಧ್ಯಕ್ಷ ದೊಡ್ಡನಗೌಡ ಪಾಟೀಲ, ಜಿ.ಪಂ. ಅದ್ಯಕ್ಷ ವಿಶ್ವನಾಥ ಹೊಸಮನಿ ಮೊದಲಾದವರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸಚಿವರು ಬಂದಾಗ ದೂರದಿಂದಲೇ ಹೂ - ಹಾರ ಹಾಕುವ ವಿಚಾರವಾಗಿ ಮಾತನಾಡಿಕೊಂಡಿದ್ದರು.

ಸಾಮಾಜಿಕ ಅಂತರ ಮರೆತು ಸಚಿವರನ್ನು ಸ್ವಾಗತಿಸಿದ ಕಾರ್ಯಕರ್ತರು

ಇನ್ನು ಸಚಿವ ಈಶ್ವರಪ್ಪ ಬರುತ್ತಿದ್ದಂತೆ ಸಾಮಾಜಿಕ ಅಂತರ ಮೀರಿ ಸಚಿವರತ್ತ ಧಾವಿಸಿದರಲ್ಲದೇ ಸರ್ಕ್ಯೂಟ್ ಹೌಸ್​ನೊಳಗೆ ನುಗ್ಗಲು ಯತ್ನಿಸಿದ ಸಂದರ್ಭದಲ್ಲಿ ಪೊಲೀಸರು ತಡೆದರು. ಸಚಿವರ ಭೇಟಿಯ ಈ ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರ ಮಾದರಿಯಾಗಿರಬೇಕಿತ್ತು. ಆದರೆ, ಕೊರೊನಾ ವೈರಸ್ ಇಲ್ಲವೇನೋ ಎಂಬ ಭಾವನೆ ಮೂಡಿತ್ತು.

ಮನವಿ ಪತ್ರ

ಈ ಅಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಲಾಲಬಿ ಹುಸೇನಸಾಬ್ ಬೇವಿನಗಿಡ, ಪಿಡಿಒ, ಜೆಇ, ಕಾರ್ಯದರ್ಶಿ, ಕಂಪ್ಯೂಟರ್ ಆಪರೇಟರ್ ಈ ಅಕ್ರಮದಲ್ಲಿ ಭಾಗಿಯಾಗಿ ಅಂದಾಜು 7 ಕೋಟಿ ರೂ. ಕಾಮಗಾರಿ ನಡೆಸದೇ ಬೋಗಸ್ ಬಿಲ್ಲುಗಳನ್ನು ಸೃಷ್ಟಿಸಿದ್ದಾರೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆಗಿರುವ ಬ್ರಹ್ಮಾಂಡ ಭ್ರಷ್ಟಾಚಾರದ ಕುರಿತು ಪೂರಕ ದಾಖಲೆಗಳ ಸಮೇತ ಕುಷ್ಟಗಿ ತಾ.ಪಂ. ಹಿಡಿದು, ಜಿ.ಪಂ. ಸಿಇಒ, ಓಂಬುಡ್ಸಮನ್ ಜಿ.ಪಂ. ಕೊಪ್ಪಳ ಮನವಿ ಸಲ್ಲಿಸಿದರೂ ತನಿಖೆಗೆ ಮುಂದಾಗಿಲ್ಲ. ಈ ಅಕ್ರಮದಲ್ಲಿ ಭಾಗಿಯಾದ ಕ್ಯಾದಿಗುಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಲಾಲಬಿ ಬೇಗಂ ಹುಸೇನಸಾಬ್ ಬೇವಿನಗಿಡ ಅವರ ಅಕ್ರಮ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಪ್ರಕಾಶ ದಾಸರ್, ಮಹಾಂತೇಶ ಪಾಟೀಲ್​​​ ಮತ್ತಿತರರು ಸಚಿವ ಈಶ್ವರಪ್ಪ ಅವರನ್ನು ಒತ್ತಾಯಿಸಿ ಮನವಿ ಸಲ್ಲಿಸಿದರು.

ABOUT THE AUTHOR

...view details