ಕರ್ನಾಟಕ

karnataka

ETV Bharat / state

ಫೋಟೋ ತೆಗೆಸಿಕೊಂಡ್ರೆ ಅವರ ಜೊತೆ ಸಂಪರ್ಕವಿದೆ ಎಂದಲ್ಲ : ಸಚಿವ ಜಗದೀಶ್​ ಶೆಟ್ಟರ್​ - ಸಚಿವ ಜಗದೀಶ ಶೆಟ್ಟರ್

ಈಗ ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ನಮ್ಮದೆ ಸರ್ಕಾರವಿರುವುದರಿಂದ ಬಿಜೆಪಿಯವರ ಜೊತೆ ಆರೋಪಿ ಯುವರಾಜ ಫೋಟೋ ತೆಗೆಸಿಕೊಂಡಿರುವ ವಿಚಾರಕ್ಕೆ ಈಗ ಪ್ರಾಮುಖ್ಯತೆ ಬರುತ್ತಿದೆ‌. ಈ ಪ್ರಕರಣದ ತನಿಖೆಯನ್ನು ಸಿಸಿಬಿಯವರು ಮಾಡುತ್ತಿದ್ದಾರೆ..

Jagadeesh shette
ಜಗದೀಶ್​ ಶೆಟ್ಟರ್​

By

Published : Jan 9, 2021, 7:25 PM IST

ಕೊಪ್ಪಳ :ಹಲವಾರು ಜನರು ರಾಜಕಾರಣಿಗಳ ಜೊತೆಯಲ್ಲಿ ಫೋಟೋ ತೆಗೆಸಿಕೊಂಡಿರುತ್ತಾರೆ. ಹಾಗಂತಾ ಅವರೊಂದಿಗೆ ಸಂಪರ್ಕವಿದೆ ಎಂದು ಅರ್ಥವಲ್ಲ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಬೃಹತ್‌ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಮಾತು..

ಜಿಲ್ಲೆಯ ಕುಕನೂರು ತಾಲೂಕಿನ ಭಾನಾಪುರ ಬಳಿ ಆಟಿಕೆ ವಸ್ತು ತಯಾರಿಕಾ ಘಟಕದ ಭೂಮಿ ಪೂಜೆ ಕಾರ್ಯಕ್ರಮದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಂಚಕ ಯುವರಾಜ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಈ ಪ್ರಕರಣದ ಕುರಿತಂತೆ ಈಗ ತನಿಖೆ ನಡೆಯುತ್ತಿದೆ.

ಎಲ್ಲ ಪಾರ್ಟಿಯವರ ಜೊತೆ ಎಲ್ಲರೂ ಫೋಟೋ ತೆಗೆಸಿಕೊಂಡಿರುತ್ತಾರೆ. ಅದರಲ್ಲೂ ಇಂತಹ ವ್ಯಕ್ತಿಗಳು ರಾಜಕಾರಣಿಗಳ ಜೊತೆ ಫೋಟೋ ತೆಗೆಸಿಕೊಳ್ತಾರೆ. ಹಾಗಂತಾ, ಅವರೊಂದಿಗೆ ಸಂಪರ್ಕವಿದೆ ಎಂದಲ್ಲ ಎಂದರು.

ಓದಿ...ಯಾರ ಜೊತೆಗೋ ಫೋಟೋ ಇದ್ದಾಕ್ಷಣ ಅಪರಾಧವಾಗೋದಿಲ್ಲ : ಸಿಎಂ ಬಿ ಎಸ್​ ಯಡಿಯೂರಪ್ಪ

ಈಗ ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ನಮ್ಮದೆ ಸರ್ಕಾರವಿರುವುದರಿಂದ ಬಿಜೆಪಿಯವರ ಜೊತೆ ಆರೋಪಿ ಯುವರಾಜ ಫೋಟೋ ತೆಗೆಸಿಕೊಂಡಿರುವ ವಿಚಾರಕ್ಕೆ ಈಗ ಪ್ರಾಮುಖ್ಯತೆ ಬರುತ್ತಿದೆ ಎಂದರು‌. ಈ ಪ್ರಕರಣದ ತನಿಖೆಯನ್ನು ಸಿಸಿಬಿಯವರು ಮಾಡುತ್ತಿದ್ದಾರೆ.

ಮುಖ್ಯಮಂತ್ರಿಗಳಾಲಿ, ಸಚಿವರಾಗಲಿ ಹಸ್ತಕ್ಷೇಪ ಮಾಡುವುದಿಲ್ಲ. ಅವರು ಏನು ಕಾನೂನು ಕ್ರಮ ಕೈಗೊಳ್ಳಬೇಕೋ ಅದನ್ನು ತೆಗೆದುಕೊಳ್ಳುತ್ತಾರೆ ಎಂದು ಸಚಿವ ಜಗದೀಶ ಶೆಟ್ಟರ್ ಹೇಳಿದರು‌. ಇನ್ನು, ಭಾನಾಪುರ ಬಳಿ ಸ್ಥಾಪಿತವಾಗಿರುವ ಆಟಿಕೆ ಕ್ಲಸ್ಟರ್‌ನಿಂದ ಜನರಿಗೆ ಉದ್ಯೋಗಾವಕಾಶ ದೊರೆಯಲಿದೆ. ಏಕಸ್ ಸಂಸ್ಥೆ ನಮ್ಮ ಉತ್ತರ ಕರ್ನಾಟಕ ಭಾಗದ್ದೆ ಎಂದರು.

ABOUT THE AUTHOR

...view details