ಕರ್ನಾಟಕ

karnataka

ETV Bharat / state

ಕೊಪ್ಪಳದಲ್ಲಿ ಕೊರೊನಾ ಪರೀಕ್ಷೆ ನೂತನ ಲ್ಯಾಬ್​ಗೆ ಸಚಿವ ಬಿ.ಸಿ.ಪಾಟೀಲ್ ಚಾಲನೆ - Corona Model Testing

ಕೊಪ್ಪಳದ ಕಿಮ್ಸ್​ನಲ್ಲಿ ಸ್ಥಾಪಿಸಲಾಗಿರುವ ಕೊರೊನಾ ಪರೀಕ್ಷೆ ನೂತನ ಲ್ಯಾಬ್​ಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಚಾಲನೆ ನೀಡಿದರು.

Minister inaugurated new Lab of Corona Testing of Koppal
ಕೊಪ್ಪಳದ ಕೊರೊನಾ ಮಾದರಿ ಪರೀಕ್ಷೆಯ ನೂತನ ಲ್ಯಾಬ್ ಗೆ ಸಚಿವ ಬಿ. ಸಿ. ಪಾಟೀಲ್ ಚಾಲನೆ

By

Published : Jun 5, 2020, 5:05 PM IST

ಕೊಪ್ಪಳ: ನಗರದ ಕಿಮ್ಸ್​​​ನಲ್ಲಿ ಸ್ಥಾಪಿಸಲಾಗಿರುವ ಕೊರೊನಾ ಪರೀಕ್ಷೆ ನೂತನ ಲ್ಯಾಬ್​ಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಇಂದು ಚಾಲನೆ ನೀಡಿದರು.

ಕೊಪ್ಪಳದಲ್ಲಿ ಕೊರೊನಾ ಪರೀಕ್ಷೆ ನೂತನ ಲ್ಯಾಬ್​ಗೆ ಸಚಿವ ಬಿ.ಸಿ.ಪಾಟೀಲ್ ಚಾಲನೆ

ನೂತನ ಲ್ಯಾಬ್​​ಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸಚಿವ ಬಿ.ಸಿ.ಪಾಟೀಲ್, 23.75 ಲಕ್ಷ ರೂಪಾಯಿ ವೆಚ್ಚದಲ್ಲಿ ಸಿವಿಲ್ ಕಾಮಗಾರಿ ಹಾಗೂ 111.93 ಲಕ್ಷ ರೂಪಾಯಿ ಅಂದಾಜು ವೆಚ್ಚದಲ್ಲಿ ಉಪಕರಣಗಳನ್ನು ಖರೀದಿಸಿ ನೂತನ ಲ್ಯಾಬ್ ಸ್ಥಾಪಿಸಲಾಗಿದ್ದು, ಇನ್ಮುಂದೆ ಜಿಲ್ಲೆಯ ಕೊರೊನಾ ಮಾದರಿಗಳ ಪರೀಕ್ಷೆ ಇದೇ ಲ್ಯಾಬ್​ನಲ್ಲಿ ನಡೆಯಲಿದೆ. ಇಲ್ಲಿನ ಆರ್​ಟಿಪಿಸಿಆರ್ ಉಪಕರಣದಲ್ಲಿ ಪ್ರತಿ ಶಿಫ್ಟ್​​ಗೆ 70ರಿಂದ 80 ಹಾಗೂ ಪ್ರತಿ ದಿನ 140ರಿಂದ 145 ಮಾದರಿಗಳನ್ನು ಪರೀಕ್ಷೆ ಮಾಡಬಹುದು. ಟ್ರೂನ್ಯಾಟ್ ಉಪಕರಣದಲ್ಲಿ ಪ್ರತಿ ಶಿಫ್ಟ್​​ಗೆ 20ರಿಂದ 25 ಹಾಗೂ ಪ್ರತಿ ದಿನ 40ರಿಂದ 50 ಮಾದರಿಗಳನ್ನು ಪರೀಕ್ಷೆ ಮಾಡಬಹುದು ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಈವರೆಗೆ ಒಟ್ಟು 4504 ಜನರ ಮಾದರಿ ಸಂಗ್ರಹಿಸಲಾಗಿದೆ. ಈ ಪೈಕಿ 4314 ಜನರ ವರದಿ ನೆಗೆಟಿವ್ ಬಂದಿದ್ದು, 4 ಜನರಿಗೆ ಸೋಂಕು ತಗುಲಿರೋದು ದೃಢವಾಗಿದೆ. 190 ಜನರ ಲ್ಯಾಬ್ ವರದಿ ಇನ್ನೂ ಬರಬೇಕಿದೆ. ಸೋಂಕು ದೃಢವಾದ ನಾಲ್ವರ ಪೈಕಿ ಈಗಾಗಲೇ ಮೂರು ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನೊಬ್ಬ ಸೋಂಕಿತನಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ತಿಳಿಸಿದರು.

ಈ ಲ್ಯಾಬ್​ನಲ್ಲಿ ಈಗಾಗಲೇ 55 ಜನರ ಮಾದರಿ ಪರೀಕ್ಷೆ ಮಾಡಲಾಗಿದ್ದು, ಎಲ್ಲಾ ಸ್ಯಾಂಪಲ್ಸ್ ವರದಿ ನೆಗೆಟಿವ್ ಬಂದಿದೆ. ಇಲ್ಲಿಯವರೆಗೆ ಸ್ಯಾಂಪಲ್​​ಗಳನ್ನು ಬಳ್ಳಾರಿ ಹಾಗೂ ಬೆಂಗಳೂರಿನ ಲ್ಯಾಬ್​ಗಳಿಗೆ ಕಳಿಸಲಾಗುತ್ತಿತ್ತು. ಈಗ ಕೊಪ್ಪಳದಲ್ಲಿಯೇ ಲ್ಯಾಬ್ ಆರಂಭವಾಗಿದೆ. ಇನ್ಮುಂದೆ ಜಿಲ್ಲೆಯ ಸ್ಯಾಂಪಲ್​ಗಳ ಪರೀಕ್ಷೆ ಇಲ್ಲಿಯೇ ನಡೆಯಲಿದೆ ಎಂದು ಸಚಿವ ಬಿ.ಸಿ.ಪಾಟೀಲ್ ಹೇಳಿದರು.

ABOUT THE AUTHOR

...view details