ಕೊಪ್ಪಳ: ಜನರ ಆಶೀರ್ವಾದವಿದ್ದರೆ ಮುಖ್ಯಮಂತ್ರಿಯಾಗಲು ಇಚ್ಛಿಸಿರುವೆ ಎಂದಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವ ಹಾಲಪ್ಪ ಆಚಾರ, ಇದೀಗ ನನಗೆ ಮುಖ್ಯಮಂತ್ರಿಯಾಗುವ ಹುಚ್ಚೂ ಇಲ್ಲ, ಅದರ ಆಕಾಂಕ್ಷೆಯೂ ಇಲ್ಲ ಎಂದು ಹೇಳಿದ್ದಾರೆ.
ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ರಾಜೂರು ಗ್ರಾಮದಲ್ಲಿ ನಡೆದ ಸಭೆಯೊಂದರಲ್ಲಿ ಪಾಲ್ಗೊಂಡು ಮಾತನಾಡಿದ್ದ ಸಚಿವ ಹಾಲಪ್ಪ, ನಾನು ಶಾಸಕನಾಗಿ, ಮಂತ್ರಿಯಾಗಿ ಉತ್ತಮ ಕೆಲಸ ಮಾಡುತ್ತಿದ್ದೇನೆ. ಜನರ ಆಶೀರ್ವಾದವಿದ್ದರೆ ಸಿಎಂ ಆಗಿ ಕೆಲಸ ಮಾಡಲಿಚ್ಛಿಸಿದ್ದೇನೆ ಎಂದಿದ್ದರು. ಈ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಿಎಂ ಆಗುವ ಆಸೆನೇ ಇಲ್ಲವೆಂದಾಗ ಆ ಹುದ್ದೆ ಬಯಸುವುದು ಎಲ್ಲಿಂದ ಬಂತು ಎಂದರು.