ಕರ್ನಾಟಕ

karnataka

ETV Bharat / state

ಸಿಎಂ ಬದಲಾವಣೆ ಕೇವಲ ಊಹಾಪೋಹ: ಸಚಿವ ಹಾಲಪ್ಪ ಆಚಾರ್ - ವಿಧಾನ ಪರಿಷತ್ ಚುನಾವಣೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Karnataka Chief Minister Basavaraj Bommai) ಬದಲಾಗುತ್ತಾರೆ ಎಂಬುದು ಕಟ್ಟು ಕಥೆ. ಇದು ಕೇವಲ ಊಹಾಪೋಹ ಎಂದು ಸಚಿವ ಹಾಲಪ್ಪ ಆಚಾರ್ (Minister Halappa Achar) ಸ್ಪಷ್ಟಪಡಿಸಿದರು.

ಹಾಲಪ್ಪ ಆಚಾರ್
ಹಾಲಪ್ಪ ಆಚಾರ್

By

Published : Nov 18, 2021, 1:21 PM IST

ಕೊಪ್ಪಳ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Karnataka Chief Minister Basavaraj Bommai) ಬದಲಾಗುತ್ತಾರೆ ಎನ್ನುವುದು ಕೇವಲ ಊಹಾಪೋಹ ಎಂದು ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ‌ ಕಲ್ಯಾಣ ಇಲಾಖೆ ಸಚಿವ ಹಾಲಪ್ಪ ಆಚಾರ್ (Minister Halappa Achar) ಹೇಳಿದರು.

ಕೊಪ್ಪಳಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಆಗಮಿಸುತ್ತಿರುವ ಹಿನ್ನೆಲೆ ಮುಖ್ಯಮಂತ್ರಿ ಸ್ವಾಗತಿಸಲು ತಾಲೂಕಿನ ಬಸಾಪುರ ಬಳಿಯ ಖಾಸಗಿ ಏರ್ ಸ್ಟ್ರಿಪ್ ಬಳಿ ಆಗಮಿಸಿದ ಮೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿಎಂ ಬದಲಾಗುತ್ತಾರೆ ಎಂಬುದು ಕಟ್ಟು ಕಥೆ ಎಂದು ಸ್ಪಷ್ಟನೆ ನೀಡಿದರು.

ಕೊಪ್ಪಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಹಾಲಪ್ಪ ಆಚಾರ್

ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ವಿಧಾನ ಪರಿಷತ್ ಚುನಾವಣೆ (Legislative Council Election) ಇರುವುದರಿಂದ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಇಂದು ಸಂಜೆ ಅಥವಾ ನಾಳೆ ಕೊಪ್ಪಳ, ರಾಯಚೂರು ವಿಧಾನ ಪರಿಷತ್ ಚುನಾಚಣೆಗೆ ಬಿಜೆಪಿ ಅಭ್ಯರ್ಥಿ ಹೆಸರು ಘೋಷಿಸಲಾಗುವುದು. ಪಕ್ಷದ ಹಿರಿಯರು ಈ ಕುರಿತು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.

ABOUT THE AUTHOR

...view details