ಗಂಗಾವತಿ:ನಾವು ಯಾರನ್ನೂ ಕೇಳಿ ಕೋರ್ಟ್ಗೆ ಹೋಗುವ ಅಗತ್ಯವಿಲ್ಲ. ಷಡ್ಯಂತ್ರಕ್ಕೆ ಬಲಿಯಾಗಬಾರದು ಎಂಬ ಕಾರಣಕ್ಕೆ ನಾವೆಲ್ಲ ಚಿಂತನೆ ನಡೆಸಿ, ಅನಗತ್ಯ ವರದಿಗಳನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡದಂತೆ ಕೋರ್ಟ್ ಮೊರೆ ಹೋಗಿದ್ದೇವೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.
ಓದಿ: ರಮೇಶ್ ಜಾರಕಿಹೊಳಿ ಪ್ರಕರಣ: ಸಂತ್ರಸ್ತೆ ಪತ್ತೆಗಾಗಿ ಪೊಲೀಸರಿಂದ ಪಿಜಿಗಳಲ್ಲಿ ನಿರಂತರ ಶೋಧ
ಬಿಜೆಪಿ ಕಿಸಾನ್ ಘಟಕ ಮತ್ತು ಮಾಜಿ ಸಿಎಂ ಸದಾನಂದಗೌಡ, ಸಚಿವರು ಕೋರ್ಟ್ಗೆ ಹೋಗುವ ಅಗತ್ಯವಿರಲಿಲ್ಲ ಎಂದು ಹೇಳಿಕೆ ನೀಡಿದ್ದರ ಬಗ್ಗೆ ಗಂಗಾವತಿಯಲ್ಲಿ ಸಚಿವ ಬಿ.ಸಿ. ಪಾಟೀಲ ಪ್ರತಿಕ್ರಿಯೆ ನೀಡಿದರು.
ಇದು ನಮ್ಮ ವೈಯಕ್ತಿಕ, ಇದು ಕೇವಲ ನಮ್ಮ ಚಿಂತನೆ. ಇಂದು ಯಾರು ಏನು ಬೇಕಾದರೂ ಮಾಡಬಹುದು. ಅದರಿಂದ ರಕ್ಷಣೆ ಪಡೆಯಲು ಇನ್ನಷ್ಟು ಜನ ಸಚಿವರು ಕೋರ್ಟ್ಗೆ ಹೋಗುವ ಸಾಧ್ಯತೆಗಳಿವೆ. ಮುಂಜಾಗ್ರತಾ ಕ್ರಮವಾಗಿ ನಾವು ಕೋರ್ಟ್ಗೆ ಹೋಗಿದ್ದೇವೆ, ಇದರಲ್ಲಿ ಬೇರೆ ಯಾವ ಉದ್ದೇಶವಿಲ್ಲ ಎಂದರು.
ಸಾ.ರಾ. ಮಹೇಶಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ. ಅಸಲಿಗೆ ಅವರು ಯಾರು ಪ್ರಶ್ನಿಸಲು..? ಸಾರಾ ಮಂತ್ರಿಗಿರಿ ಹೋಯ್ತು, ಹಾಗಾಗಿ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಸಾರಾಗೆ ಉತ್ತರ ನೀಡುವ ಅವಶ್ಯಕತೆ ಇಲ್ಲ ಎಂದು ಬಿ.ಸಿ. ಪಾಟೀಲ ಹೇಳಿದರು.