ಗಂಗಾವತಿ:ರಾಜೀನಾಮೆ ನೀಡಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ ಹಿನ್ನೆಲೆ ನಾವು ಟಾರ್ಗೆಟ್ ಆಗಿದ್ದೇವೆ. ಈ ಹಿನ್ನೆಲೆ ಆತ್ಮ ರಕ್ಷಣೆಗಾಗಿ ಕೋರ್ಟ್ ಮೊರೆ ಹೋಗಿದ್ದೇವೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಸ್ಪಷ್ಟನೆ ನೀಡಿದರು.
ಸರ್ಕಾರ ರಚನೆಗೆ ಕಾರಣರಾದ ನಾವು ಟಾರ್ಗೆಟ್ ಆಗಿದ್ದೇವೆ: ಸಚಿವ ಬಿ ಸಿ ಪಾಟೀಲ್ - ಆತ್ಮ ರಕ್ಷಣೆಗಾಗಿ ಕೋರ್ಟ್ ಮೊರೆ
ನಮ್ಮ ಯಶಸ್ಸನ್ನು ಸಹಿಸದ ಜನ ಷಡ್ಯಂತ್ರ ಮಾಡಿ ನಮ್ಮ ರಾಜಕೀಯ ಭವಿಷ್ಯ ಹಾಳು ಮಾಡಲು ಯತ್ನ ನಡೆಸಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.
![ಸರ್ಕಾರ ರಚನೆಗೆ ಕಾರಣರಾದ ನಾವು ಟಾರ್ಗೆಟ್ ಆಗಿದ್ದೇವೆ: ಸಚಿವ ಬಿ ಸಿ ಪಾಟೀಲ್ Minister BC Patil](https://etvbharatimages.akamaized.net/etvbharat/prod-images/768-512-10892854-thumbnail-3x2-chaii.jpg)
ಸಚಿವ ಬಿಸಿ ಪಾಟೀಲ್
ಸಚಿವ ಬಿ ಸಿ ಪಾಟೀಲ್ ಪ್ರತಿಕ್ರಿಯೆ
ನಗರದ ಹೆಲಿಪ್ಯಾಡ್ನಲ್ಲಿ ಮಾತನಾಡಿದ ಸಚಿವರು, ನಮ್ಮ ಯಶಸ್ಸನ್ನು ಸಹಿಸದ ಜನ ಷಡ್ಯಂತ್ರ ಮಾಡಿ ನಮ್ಮ ರಾಜಕೀಯ ಭವಿಷ್ಯ ಹಾಳು ಮಾಡಲು ಯತ್ನ ನಡೆಸಿದ್ದಾರೆ. ನಮ್ಮನ್ನು ಹಾಳು ಮಾಡುವ ಉದ್ದೇಶಕ್ಕೆ ಸಾಕಷ್ಟು ಜನ ಕಾಯ್ತಾ ಇದ್ದಾರೆ ಎಂದರು.
ಈಗಾಗಲೇ ಸಾಕಷ್ಟು ಇಂಥಹ ಘಟನೆಗಳು ನಡೆದಿವೆ. ಇದಕ್ಕೆ ಅವಕಾಶ ಕೊಡಬಾರದು ಎಂಬ ಕಾರಣಕ್ಕೆ ಮುಂಚಿತವಾಗಿ ನ್ಯಾಯಾಲಯದ ಮೊರೆ ಹೋಗಿದ್ದೇವೆ. ನಮಗೆ ಯಾವುದೇ ಆತಂಕವಿಲ್ಲ, ಆದರೆ ಅಪಖ್ಯಾತಿಯಿಂದ ರಕ್ಷಣೆ ಪಡೆಯುವುದು ಅನಿವಾರ್ಯ. ಸತ್ಯ ಹೊಸಲು ದಾಟಿ ಬರುವ ಮುನ್ನ ಸುಳ್ಳು ಊರು ಸುತ್ತಿ ಬರುತ್ತೆ ಎಂದರು.