ಕೊಪ್ಪಳ : ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಮೇ 3 ರ ವರೆಗಿನ ಲಾಕ್ಡೌನ್ ಆದೇಶಕ್ಕೆ ಜಿಲ್ಲೆಯ ಜನರು ಸಹಕರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಬಿ. ಸಿ. ಪಾಟೀಲ್ ಮನವಿ ಮಾಡಿದ್ದಾರೆ.
ಲಾಕ್ಡೌನ್ 2.0 ಗೆ ಸಹಕರಿಸಿ: ಕೊಪ್ಪಳ ಜನರಲ್ಲಿ ಬಿ. ಸಿ ಪಾಟೀಲ್ ಮನವಿ - b.c paril latest news
ಕೊಪ್ಪಳ ಜಿಲ್ಲೆಯ ಜನರು ಲಾಕ್ಡೌನ್ಗೆ ಸಹಕಾರ ನೀಡಬೇಕು. ಇಂತಹ ಕಷ್ಟದ ದಿನದಲ್ಲಿ ನಿಮ್ಮ ಸಹಕಾರ ಮುಖ್ಯವಾಗಿದೆ ಎಂದು ಸಚಿವ ಬಿಸಿ ಪಾಟೀಲ್ ಮನವಿ ಮಾಡಿಕೊಂಡಿದ್ದಾರೆ.

ಬಿ. ಸಿ ಪಾಟೀಲ್ ಮನವಿ
ವಿಡಿಯೋ ಸಂದೇಶದ ಮೂಲಕ ಮನವಿ ಮಾಡಿರುವ ಅವರು, ಜನತೆಯ ಹಿತದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಲಾಕ್ಡೌನ್ಗೆ ಕರೆ ನೀಡಿದ್ದಾರೆ. ಹೀಗಾಗಿ, ಕೊಪ್ಪಳ ಜಿಲ್ಲೆಯ ಜನರೂ ಸಹ ವೈದ್ಯರು, ಪೊಲೀಸರು, ಜಿಲ್ಲಾ ಆಡಳಿತಕ್ಕೆ ಸಹಕಾರ ನೀಡಬೇಕು. ಇಂತಹ ಕಷ್ಟದ ದಿನದಲ್ಲಿ ನಿಮ್ಮ ಸಹಕಾರ ಮುಖ್ಯವಾಗಿದೆ ಎಂದರು.
ಕೊಪ್ಪಳ ಜನರಲ್ಲಿ ಬಿ. ಸಿ ಪಾಟೀಲ್ ಮನವಿ
ಪ್ರತಿಯೊಬ್ಬರೂ ಸಾಮಾಜಿಕ ಅಂತರ ಕಾಯ್ದುಕೊಂಡು ಕೊರೊನಾ ಹೊಗಲಾಡಿಸಲು ಶ್ರಮಿಸೋಣ. ನಿಮ್ಮೊಂದಿಗೆ ನಾವಿದ್ದೇವೆ. ನಿಮ್ಮ ಸಹಕಾರ ಯಾವಾಗಲೂ ಇರಲಿ ಹಾಗೂ ಸಾಮಾಜಿಕ ಅಂತರವಿರಲಿ ಎಂದು ಸಚಿವರು ಮನವಿ ಮಾಡಿದ್ದಾರೆ.