ಕರ್ನಾಟಕ

karnataka

ETV Bharat / state

ಅಂಜನಾದ್ರಿಯ ಹನುಮನಿಗೆ ವಿಶೇಷ ಪೂಜೆ ಸಲ್ಲಿಸಿದ ಸಚಿವ ಲಿಂಬಾವಳಿ - Minister Aravinda Limbavali made special pooja to hanuman in anjanadri

ಅಟಲ್ ಬಿಹಾರಿ ವಾಜಪೇಯಿ ವನ್ಯಜೀವಿ ಪಾರ್ಕ್​ ಅಭಿವೃದ್ಧಿಗಾಗಿ ಭೇಟಿ ನೀಡುತ್ತಿದ್ದೇನೆ. ಅಲ್ಲದೆ ಬೇಸಿಗೆಯಲ್ಲಿ ವಿಶೇಷವಾಗಿ ಪ್ರಾಣಿಗಳು ಅನುಭವಿಸುವ ಸಮಸ್ಯೆ ಕಂಡುಕೊಂಡು ಪರಿಹಾರಕ್ಕೆ ಪ್ರವಾಸ ಹಮ್ಮಿಕೊಳ್ಳುತ್ತೇನೆ..

minister-aravinda-limbavali-made-special-pooja-to-hanuman
ಅಂಜನಾದ್ರಿಯ ಹನುಮನಿಗೆ ವಿಶೇಷ ಪೂಜೆ ಸಲ್ಲಿಸಿದ ಸಚಿವ ಲಿಂಬಾವಳಿ

By

Published : Apr 16, 2021, 8:13 PM IST

ಗಂಗಾವತಿ :ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ತಾಲೂಕಿಗೆ ಭೇಟಿ ನೀಡಿದ ಅರವಿಂದ ಲಿಂಬಾವಳಿ ಅವರು, ಅಂಜನಾದ್ರಿ ಬೆಟ್ಟದಲ್ಲಿ ಹನುಮಂತ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ಬೆಟ್ಟದ ಕೆಳ ಭಾಗದಿಂದಲೇ ಕೈಮುಗಿದು ದರ್ಶನ ಪಡೆದುಕೊಂಡ ಸಚಿವರು, ತದ ನಂತರ ಕೆಳಭಾಗದಲ್ಲಿ ಆಯೋಜಿಸಿದ್ದ ವಿಶೇಷ ಪೂಜೆ, ಹೋಮದಲ್ಲಿ ಪಾಲ್ಗೊಂಡಿದ್ದರು. ಶಾಸಕ ಪರಣ್ಣ ಮುನವಳ್ಳಿ, ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ಸೇರಿ ಇತರರು ಸಾಥ್ ನೀಡಿದರು.

ಅಂಜನಾಂದ್ರಿ ಬೆಟ್ಟದಲ್ಲಿ ಸಚಿವ ಅರವಿಂದ ಲಿಂಬಾವಳಿ..

ಈ ಕುರಿತು ಮಾತನಾಡಿದ ಅವರು, ಅರಣ್ಯ ಇಲಾಖೆಯ ಅಭಿವೃದ್ಧಿ ವಿಚಾರವಾಗಿ ಪರಿಶೀಲನೆ ನಡೆಸಲು ಬಂದಿದ್ದೇನೆ. ಕರಡಿ ಹೆಚ್ಚಿಗೆ ವಾಸ ಮಾಡುತ್ತಿರುವ ಹಿನ್ನೆಲೆ ಅವುಗಳ ವಾಸಕ್ಕೆ ಯೋಗ್ಯವಾಗುವಂತೆ ಸೂಕ್ತ ಯೋಜನೆ ಕೈಗೊಳ್ಳುವ ಆಲೋಚನೆ ಇದೆ.

ಅಟಲ್ ಬಿಹಾರಿ ವಾಜಪೇಯಿ ವನ್ಯಜೀವಿ ಪಾರ್ಕ್​ ಅಭಿವೃದ್ಧಿಗಾಗಿ ಭೇಟಿ ನೀಡುತ್ತಿದ್ದೇನೆ. ಅಲ್ಲದೆ ಬೇಸಿಗೆಯಲ್ಲಿ ವಿಶೇಷವಾಗಿ ಪ್ರಾಣಿಗಳು ಅನುಭವಿಸುವ ಸಮಸ್ಯೆ ಕಂಡುಕೊಂಡು ಪರಿಹಾರಕ್ಕೆ ಪ್ರವಾಸ ಹಮ್ಮಿಕೊಳ್ಳುತ್ತೇನೆ ಎಂದು ತಿಳಿಸಿದರು.

ಓದಿ:ಸಿಎಂ ಸಭೆಯಲ್ಲಿ ಭಾಗಿಯಾದವರೆಲ್ಲಾ ಕ್ವಾರಂಟೈನ್..? ಚಿಕ್ಕಬಳ್ಳಾಪುರ ಪ್ರವಾಸ ರದ್ದು ಮಾಡಿದ ಸಚಿವ ಸುಧಾಕರ್!

ABOUT THE AUTHOR

...view details