ಕರ್ನಾಟಕ

karnataka

ETV Bharat / state

ಕೊರೊನಾ ಭಯ.. ಹುಟ್ಟೂರಿಗೆ ವಾಪಸಾಗುತ್ತಿರೋ ವಲಸೆ ಕಾರ್ಮಿಕರು.. - return to their homes

ದುಡಿಮೆಗಾಗಿ ದೂರದ ನಗರಗಳಿಗೆ ಮಕ್ಕಳನ್ನು ಕಟ್ಟಿಕೊಂಡು ಕುಟುಂಬ ಸಮೇತ ದುಡಿಯಲು ಹೋಗಿದ್ದ‌ ಕಾರ್ಮಿಕರು, ಗಂಟು ಮೂಟೆ ಕಟ್ಟಿಕೊಂಡು ತಮ್ಮ‌ ಗ್ರಾಮಗಳಿಗೆ ಮರಳುತ್ತಿದ್ದಾರೆ..

 Migrants who return to their homes
Migrants who return to their homes

By

Published : Apr 25, 2021, 2:54 PM IST

Updated : Apr 25, 2021, 4:00 PM IST

ಕೊಪ್ಪಳ: ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ವೀಕೆಂಡ್ ಲಾಕ್‌ಡೌನ್ ಜಾರಿ ಮಾಡಿರುವುದರಿಂದ ವಲಸೆ ಕಾರ್ಮಿಕರು ತಮ್ಮ ಗ್ರಾಮಗಳತ್ತ ಮುಖ ಮಾಡುತ್ತಿದ್ದಾರೆ.

ದುಡಿಮೆಗಾಗಿ ದೂರದ ನಗರಗಳಿಗೆ ಮಕ್ಕಳನ್ನು ಕಟ್ಟಿಕೊಂಡು ಕುಟುಂಬ ಸಮೇತ ದುಡಿಯಲು ಹೋಗಿದ್ದ‌ ಕಾರ್ಮಿಕರು, ಗಂಟು ಮೂಟೆ ಕಟ್ಟಿಕೊಂಡು ತಮ್ಮ‌ ಗ್ರಾಮಗಳಿಗೆ ಮರಳುತ್ತಿದ್ದಾರೆ.

ಇನ್ನು, ನಗರದ ಬಸ್ ನಿಲ್ದಾಣದಲ್ಲಿ ಇವರನ್ನು ತಪಾಸಣೆ ಮಾಡಿ ಬಸ್ ಹತ್ತಿಸಲಾಗುತ್ತಿದೆ.‌ ಲಾಕ್‌ಡೌನ್ ಆಗುವ ಭೀತಿಯಲ್ಲಿ ವಾಪಸ್ ಗ್ರಾಮಕ್ಕೆ ಮರಳುತ್ತಿರುವುದಾಗಿ ವಲಸೆ‌ ಕಾರ್ಮಿಕರು ಹೇಳುತ್ತಿದ್ದಾರೆ.

Last Updated : Apr 25, 2021, 4:00 PM IST

ABOUT THE AUTHOR

...view details