ಕುಷ್ಟಗಿ(ಕೊಪ್ಪಳ):ಲಾಕ್ಡೌನ್ ಹಿನ್ನೆಲೆಯಲ್ಲಿ ಬೆಂಗಳೂರು, ಮಂಗಳೂರು, ಶಿವಮೊಗ್ಗ ಸೇರಿದಂತೆ ಹಲವೆಡೆ ಇದ್ದ ಕಾರ್ಮಿಕರು ಇಂದು ಪಟ್ಟಣಕ್ಕೆ ಬಂದಿಳಿದರು.
ಯಪ್ಪಾ ಅಂತೂ ನಮ್ಮೂರಿಗೆ ಬಂದ್ಬಿಟ್ವಿ... ಪಟ್ಟಣಕ್ಕೆ ಬಂದಿಳಿದ ಕೂಲಿ ಕಾರ್ಮಿಕರ ಮೊಗದಲ್ಲಿ ಸಂತಸ - corona latest update
ಲಾಕ್ಡೌನ್ ನಿಂದ ಸಾಕಷ್ಟು ನೊಂದಿದ್ದ ಕುಟುಂಬಗಳು ತಮ್ಮ ಗ್ರಾಮಗಳನ್ನು ಸೇರುವ ಆತುರದಲ್ಲಿದ್ದರು.
ಹಲವಡೆಯಿಂದ ಪಟ್ಟಣಕ್ಕೆ ಬಂದಿಳಿದ ಕೂಲಿ ಕಾರ್ಮಿಕರು..
ಗಂಟು, ಮೂಟೆ, ಕುಟುಂಬ ಸಮೇತರಾಗಿ ಆಗಮಿಸಿದ ಕೂಲಿ ಕಾರ್ಮಿಕರು, ಇಲ್ಲಿಂದ ಸ್ವಗ್ರಾಮಕ್ಕೆ ತೆರಳಲು ತಮ್ಮವರ ನಿರೀಕ್ಷೆಯಲ್ಲಿರುವುದು ಕಂಡು ಬಂತು. ವಸತಿ ನಿಲಯದ ವಿದ್ಯಾರ್ಥಿಗಳೂ ಸಹ ಬಂದಿದ್ದರು.
ಲಾಕ್ ಡೌನ್‌ನಿಂದ ಸಾಕಷ್ಟು ನೊಂದಿದ್ದ ಕುಟುಂಬಗಳು ತಮ್ಮ ಗ್ರಾಮಗಳನ್ನು ಸೇರುವ ಆತುರದಲ್ಲಿದ್ದರು. ನಾವ್ ಊರ್ ಮುಖ ನೋಡ್ತೇವೋ ಇಲ್ಲವೋ ಅಂದ್ಕೊಂಡಿದ್ದೆವು. ಬಸ್ ಬಿಟ್ಟು ಪುಣ್ಯ ಕಟ್ಟಿಕೊಂಡಿದ್ದಾರೆ. ಇನ್ಮುಂದೆ ಬೆಂಗಳೂರು ಕಡೆ ತಲೆ ಹಾಕಲ್ಲ, ಊರಲ್ಲಿ ಕೆಲಸ ಮಾಡಿಕೊಂಡಿರುತ್ತೇವೆ ಎಂಬ ಅಭಿಪ್ರಾಯ ಕೆಲವರಿಂದ ವ್ಯಕ್ತವಾಯಿತು.