ಕೊಪ್ಪಳ:ಅತ್ಯಂತ ಕಡಿಮೆ ಸಂಬಳದಲ್ಲಿ ಹಲವು ವರ್ಷಗಳಿಂದ ಬಿಸಿಯೂಟ ತಯಾರಿಕ ಕೆಲಸ ಮಾಡುತ್ತಿದ್ದು ಕೊರೊನಾ ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿದ್ದೇವೆ. ಸರ್ಕಾರ ಈಗಲಾದರೂ ನಮ್ಮ ನೆರವಿಗೆ ಧಾವಿಸಬೇಕೆಂದು ಬಿಸಿಯೂಟ ಕಾರ್ಯಕರ್ತೆಯರು ಆಗ್ರಹಿಸಿದ್ದಾರೆ.
ಜಿಲ್ಲೆಯಲ್ಲಿ 3,445 ಮಹಿಳೆಯರು ಬಿಸಿಯೂಟ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಪೈಕಿ ಮುಖ್ಯ ಅಡುಗೆದಾರರಿಗೆ 2,700 ಹಾಗೂ ಸಹಾಯಕ ಅಡುಗೆದಾರರಿಗೆ 2,600 ರೂಪಾಯಿ ಸಂಬಳ ನೀಡಲಾಗುತ್ತಿದೆ. ಇಷ್ಟೊಂದು ಕಡಿಮೆ ಸಂಬಳದಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನ 3 ಗಂಟೆಯವರೆಗೂ ದುಡಿಯುತ್ತೇವೆ. ಸದ್ಯ ಕೊರೊನಾ ಕಾರಣದಿಂದಾಗಿ ಶಾಲೆಗಳನ್ನು ಮುಚ್ಚಲಾಗಿದೆ. ಇದರಿಂದ ಇಷ್ಟುದಿನ ಸಿಗುತ್ತಿದ್ದ ಅಲ್ಪ ವೇತನವೂ ಸಿಗುತ್ತಿಲ್ಲ. ಲಾಕ್ಡೌನ್ನಿಂದಾಗಿ ಕೂಲಿ ಕೆಲಸವೂ ಸಿಗುತ್ತಿಲ್ಲ. ಇದರಿಂದಾಗಿ ಸಾಕಷ್ಟು ತೊಂದರೆಯಾಗಿದೆ.