ETV Bharat Karnataka

ಕರ್ನಾಟಕ

karnataka

ETV Bharat / state

ಅಬ್ಬಾ ಎಂಥಾ ಪ್ರದರ್ಶನ... ಗಂಗಾವತಿಯಲ್ಲಿ ಬಾಲಕ, ಬಾಲಕಿಯರ ವಿಶಿಷ್ಟ ಸಾಧನೆ: ವಿಡಿಯೋ - ಆನೆಗೊಂದಿ ಉತ್ಸವದ ಭಾಗವಾಗಿ ಶ್ರೀಕೃಷ್ಣ ದೇವರಾಯ ಮುಖ್ಯವೇದಿಕೆ ಬಳಿ ನಡೆದ ಗ್ರಾಮೀಣ ಕ್ರೀಡಾಕೂಟ

ಆನೆಗೊಂದಿ ಉತ್ಸವದ ಭಾಗವಾಗಿ ಶ್ರೀಕೃಷ್ಣ ದೇವರಾಯ ಮುಖ್ಯವೇದಿಕೆ ಬಳಿ ನಡೆದ ಗ್ರಾಮೀಣ ಕ್ರೀಡಾಕೂಟಗಳ ಪೈಕಿ ಬಾಲಕಿಯರ ಹಗ್ಗ-ಜಗ್ಗಾಟ, ಮಲ್ಲಕಂಬ ಹಾಗೂ ಬಾಲಕರ ಸ್ಥಿರ ಮಲ್ಲಕಂಬ ಪ್ರದರ್ಶನ ಜನರ‌ ಮನಸೂರೆಗೊಂಡಿತು.

men-and-women-mallakamba-exhibition-in-gangavathi
ಗಮನ ಸೆಳೆದ ಬಾಲಕ, ಬಾಲಕಿಯರ ಮಲ್ಲಕಂಬ ಪ್ರದರ್ಶನ...ಹೇಗಿತ್ತು ನೋಡಿ.
author img

By

Published : Jan 7, 2020, 1:34 PM IST

Updated : Jan 7, 2020, 5:31 PM IST

ಗಂಗಾವತಿ:ಆನೆಗೊಂದಿ ಉತ್ಸವದ ಭಾಗವಾಗಿ ಶ್ರೀಕೃಷ್ಣ ದೇವರಾಯ ಮುಖ್ಯವೇದಿಕೆ ಬಳಿ ನಡೆದ ಗ್ರಾಮೀಣ ಕ್ರೀಡಾಕೂಟಗಳ ಪೈಕಿ ಬಾಲಕಿಯರ ಹಗ್ಗ-ಜಗ್ಗಾಟ, ಮಲ್ಲಕಂಬ ಹಾಗೂ ಬಾಲಕರ ಸ್ಥಿರ ಮಲ್ಲಕಂಬ ಪ್ರದರ್ಶನ ಜನರ‌ ಮನಸೂರೆಗೊಂಡಿತು.

ಬಾಗಲಕೋಟೆ, ಲಕ್ಷ್ಮೇಶ್ವರ, ಶಿರಗುಪ್ಪಿ, ಹುಬ್ಬಳ್ಳಿ, ಗದಗ, ಇಳಕಲ್, ಜಮಖಂಡಿ ಮೊದಲಾದ ಜಿಲ್ಲೆಗಳಿಂದ ಬಾಲಕ ಹಾಗೂ ಬಾಲಕಿಯರ ತಲಾ ಹತ್ತು ತಂಡಗಳು ಭಾಗವಹಿಸಿದ್ದವು. ಮಲ್ಲಕಂಬ ಪ್ರದರ್ಶನದ ವೇಳೆಯಲ್ಲಿ ಮಕ್ಕಳು ಯೋಗಾಸನದ ವಿವಿಧ ಭಂಗಿಗಳನ್ನು ಪ್ರದರ್ಶಿಸಿದರು.

ಅಬ್ಬಾ ಎಂಥಾ ಪ್ರದರ್ಶನ... ಗಂಗಾವತಿಯಲ್ಲಿ ಬಾಲಕ, ಬಾಲಕಿಯರ ವಿಶಿಷ್ಟ ಸಾಧನೆ: ವಿಡಿಯೋ

ಮದುವೆ ಇಲ್ಲ,ಮುಂಜಿ ಇಲ್ಲ: ಆದರೂ ಊರೆಲ್ಲಾ ಸಿಂಗಾರ...!

ತಾಲೂಕಿನ ಆನೆಗೊಂದಿ ಗ್ರಾಮದಲ್ಲಿ ಜನವರಿ 9 ಹಾಗೂ 10ರಂದು ನಡೆಯುವ ಆನೆಗೊಂದಿ ಉತ್ಸವ-20ರ ಅಂಗವಾಗಿ ಇಡೀ ಊರಿನ ಜನ ಹಬ್ಬದ ರೀತಿಯಲ್ಲಿ ಮನೆಯನ್ನು ಸಿಂಗರಿಸಿ ಗಮನ ಸೆಳೆಯುತ್ತಿದ್ದಾರೆ. ಗ್ರಾಮದ ಪ್ರತಿಯೊಂದು ಮನೆಯ ಮುಂದೆಯೂ ತಳೀರು ತೋರಣ, ರಂಗೋಲಿ ಬಿಡಿಸಿದರೆ, ಗ್ರಾಮ ಪಂಚಾಯತಿ ಕಾರ್ಯಾಲಯವನ್ನು ಸಿಬ್ಬಂದಿ ಆಕರ್ಷಕವಾಗಿ ಸಿಂಗರಿಸಿ ಗಮನ ಸೆಳೆಯುತ್ತಿದ್ದಾರೆ.

Last Updated : Jan 7, 2020, 5:31 PM IST

For All Latest Updates

TAGGED:

ABOUT THE AUTHOR

...view details