ಕೊಪ್ಪಳ: ಜಿಲ್ಲೆಯ ತಿಗರಿ ಗ್ರಾಮದಲ್ಲಿ ಫಕೀರೇಶ್ವರ ಸ್ವಾಮಿ ಜಾತ್ರೆ ಅಂಗವಾಗಿ 25 ಜೋಡಿಗಳಿಗೆ ಸಾಮೂಹಿಕ ವಿವಾಹ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
25 ಜೋಡಿಗಳಿಗೆ ಸಾಮೂಹಿಕ ವಿವಾಹ ಕಾರ್ಯಕ್ರಮ: ದಲಿತ ಸಮುದಾಯದಿಂದ ಆಕ್ರೋಶ! - ಕೊಪ್ಪಳ ಜಿಲ್ಲೆಯ ತಿಗರಿ ಗ್ರಾಮ
ಕೊಪ್ಪಳ ಜಿಲ್ಲೆಯ ತಿಗರಿ ಗ್ರಾಮದಲ್ಲಿ ಫಕೀರೇಶ್ವರ ಸ್ವಾಮಿ ಜಾತ್ರೆ ಅಂಗವಾಗಿ 25 ಜೋಡಿಗಳಿಗೆ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಸವರ್ಣೀಯರು ನಾಲ್ಕು ದಲಿತ ಜೋಡಿಗಳಿಗೆ ಅವರ ಸಮುದಾಯ ಭವನದಲ್ಲಿಯೇ ಮದುವೆ ಆಗುವಂತೆ ತಿಳಿಸಿದ್ದಾರೆ ಎಂದು ಆರೋಪ ಕೇಳಿ ಬಂದಿದೆ. ಇದಕ್ಕೆ ಆಕ್ರೋಶಗೊಂಡ ದಲಿತ ಸಮುದಾಯದವರು, ಸ್ಥಳಕ್ಕೆ ಜಿಲ್ಲಾಧಿಕಾರಿ ಬರಬೇಕೆಂದು ಪಟ್ಟು ಹಿಡಿದ್ದಾರೆ.
ಈ 25 ಜೋಡಿಗಳ ಪೈಕಿ 4 ಜೋಡಿ ದಲಿತ ಸಮುದಾಯಕ್ಕೆ ಸೇರಿವೆ. ಈ ಸಂದರ್ಭದಲ್ಲಿ ದಲಿತರಿಗೆ ತಮ್ಮ ಸಮುದಾಯದ ಭವನದಲ್ಲಿಯೇ ಮದುವೆ ಮಾಡಿಕೊಳ್ಳಿ ಎಂದು ಸವರ್ಣೀಯರು ಹೇಳಿದ್ದಾರೆ ಎಂದು ಆರೋಪಿಸಲಾಗಿದೆ.
ಇದರಿಂದ ಆಕ್ರೋಶಗೊಂಡ ದಲಿತ ಸಮುದಾಯದ ಜನ ಸವರ್ಣೀಯರ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಬರುವವರೆಗೂ ತಾಳಿ ಕಟ್ಟುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಆಕ್ರೋಶಗೊಂಡ ದಲಿತ ಸಮುದಾಯದ ಜನರನ್ನು ಸಮಾಧಾನಪಡಿಸಲು ಪೊಲೀಸರು ಮಧ್ಯಸ್ಥಿಕೆ ವಹಿಸಿದರೂ ಪ್ರಯೋಜನವಾಗುತ್ತಿಲ್ಲ. ಸ್ಥಳಕ್ಕೆ ಜಿಲ್ಲಾಧಿಕಾರಿ ಬರಬೇಕು ಎಂದು ಪಟ್ಟು ಹಿಡಿದಿದ್ದಾರೆ.