ಕರ್ನಾಟಕ

karnataka

ETV Bharat / state

ಕೊಪ್ಪಳ ನಗರಸಭೆ ವತಿಯಿಂದ ಮಾಸ್ಕ್​ ಡೇ ಆಚರಣೆ - Koppal Corona Awareness Jatha

ಸರ್ಕಾರದ ಆದೇಶದ ಹಿನ್ನೆಲೆ ಕೊರೊನಾ ತಡೆಗಟ್ಟಲು ಮಾಸ್ಕ್​​​​ ಪಾತ್ರದ ಬಗ್ಗೆ ಜಾಗೃತಿ ಮೂಡಿಸಲು ಕೊಪ್ಪಳ ನಗರದಲ್ಲಿಂದು ಮಾಸ್ಕ್ ಡೇ ಆಚರಿಸಲಾಯಿತು.

Mask Day Celebration by Koppal Municipality
ಕೊಪ್ಪಳ ನಗರಸಭೆ ವತಿಯಿಂದ ಮಾಸ್ಕ್​ ಡೇ ಆಚರಣೆ

By

Published : Jun 18, 2020, 4:24 PM IST

ಕೊಪ್ಪಳ:ಸರ್ಕಾರದ ಆದೇಶದ ಹಿನ್ನೆಲೆ ಕೊರೊನಾ ತಡೆಗಟ್ಟಲು ಮಾಸ್ಕ್​ ಪಾತ್ರದ ಬಗ್ಗೆ ಜಾಗೃತಿ ಮೂಡಿಸಲು ಕೊಪ್ಪಳ ನಗರದಲ್ಲಿಂದು ಮಾಸ್ಕ್ ಡೇ ಆಚರಿಸಲಾಯಿತು.

ಕೊಪ್ಪಳ ನಗರಸಭೆ ವತಿಯಿಂದ ಮಾಸ್ಕ್​ ಡೇ ಆಚರಣೆ

ನಗರಸಭೆ ವತಿಯಿಂದ ಹಮ್ಮಿಕೊಂಡಿದ್ದ ಮಾಸ್ಕ್ ಡೇ ಜಾಗೃತಿ ಜಾಥಾದಲ್ಲಿ ನಗರಸಭೆ ಸಿಬ್ಬಂದಿ ಪಾಲ್ಗೊಂಡು ಜಾಗೃತಿ ಮೂಡಿಸಿದರು. ನಗರದ ಅಶೋಕ ಸರ್ಕಲ್​ನಿಂದ ಜಾಥಾ ಪ್ರಾರಂಭವಾಗಿ ಜವಾಹರ ರಸ್ತೆ, ಗಡಿಯಾರ ಕಂಬ ಸರ್ಕಲ್ ಮೂಲಕ ಗವಿಮಠದ ಆವರಣದವರೆಗೂ ನಡೆಯಿತು.

ಕೊರೊನಾ ಸೋಂಕು ಹರಡದಂತೆ ತಡೆಯಲು ಸಾಮಾಜಿಕ ಅಂತರ ಕಾಪಾಡುವುದು, ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಆಗಾಗ ಸ್ಯಾನಿಟೈಸರ್ ಅಥವಾ ಸೋಪ್ ಬಳಸಿ ಕೈಗಳನ್ನು ತೊಳೆದುಕೊಳ್ಳಬೇಕು. ಪ್ರತಿಯೊಬ್ಬರೂ ಮಾಸ್ಕ್ ಧರಿಸಬೇಕು ಎಂದು ಜಾಥಾದ ಮೂಲಕ ಸಾರ್ವಜನಿಕರಿಗೆ ಜಾಗೃತಿ‌ ಮೂಡಿಸಲಾಯಿತು.

ABOUT THE AUTHOR

...view details