ಗಂಗಾವತಿ:ತಾಲೂಕಿನ ಢಣಾಪುರ ಗ್ರಾಮದ ಶರಣಬಸೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಏರ್ಪಡಿಸಲಾಗಿದ್ದ ಅಂತರ್ ಜಿಲ್ಲಾಮಟ್ಟದ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಮರ್ಲನಹಳ್ಳಿ ತಂಡ 20 ಸಾವಿರ ನಗದು ಹಣದೊಂದಿಗೆ ಕಬ್ಬಡಿ ಚಾಂಪಿಯನ್ ಟ್ರೋಫಿ ಗೆದ್ದುಕೊಂಡಿತು.
ಕಬ್ಬಡಿ ಚಾಂಪಿಯನ್ ಟ್ರೋಫಿ: ವಿಜೇತ ಮರ್ಲನಹಳ್ಳಿ ತಂಡಕ್ಕೆ 20 ಸಾವಿರ ನಗದು
ಗಂಗಾವತಿ ತಾಲೂಕಿನ ಢಣಾಪುರ ಗ್ರಾಮದ ಶರಣಬಸೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಏರ್ಪಡಿಸಲಾಗಿದ್ದ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಮರ್ಲನಹಳ್ಳಿ ತಂಡ ಟ್ರೋಫಿ ಗೆದ್ದುಕೊಂಡಿದೆ.
ಎರಡು ದಿನಗಳ ಕಾಲ ನಡೆದ ಪಂದ್ಯದಲ್ಲಿ ಢಣಾಪುರ, ಹೆಬ್ಬಾಳ, ಕೊಟ್ಟೂರು, ಬಳಗಾನೂರು, ಮರ್ಲನಹಳ್ಳಿ, ಸಿಂಧನೂರು, ಗಂಗಾವತಿ, ಬೆಳಗೋಡ, ಯರಡೋಣ, ಕುಂಟೋಜಿ, ಬರಗೂರು, ಅಯೋಧ್ಯಾ, ನಾಗನಕಲ್, ಕಂಪ್ಲಿ ಸೇರಿದಂತೆ ಒಟ್ಟು 15ಕ್ಕೂ ಹೆಚ್ಚು ತಂಡಗಳು ಭಾಗಿಯಾಗಿದ್ದವು.
ಸಾಲುಂಚಿಮರ ಗ್ರಾಮದ ಮರ್ಲನಹಳ್ಳಿ ಬಿ ಟೀಂ ಪಂದ್ಯಾವಳಿಯಲ್ಲಿ ಅಂತಿ ಸುತ್ತು ಪ್ರವೇಶಿಸಿ ಬಳಗಾನೂರು ತಂಡವನ್ನು ಸೋಲಿಸಿತು. 20 ಸಾವಿರ ನಗದು ಟ್ರೋಫಿ ಪಡೆದರೆ, ಬಳಗಾನೂರು ತಂಡಕ್ಕೆ ಹತ್ತು ಸಾವಿರ ನಗದು ಹಾಗೂ ಟ್ರೋಫಿ ನೀಡಲಾಯಿತು. ವಿಜಯನಗರದ ಜಿಲ್ಲೆಯ ಕೊಟ್ಟೂರಿನ ತಂಡ ತೃತೀಯ ಸ್ಥಾನ ಪಡೆದುಕೊಂಡು ಐದು ಸಾವಿರ ನಗದು ಹಾಗೂ ಟ್ರೋಫಿ ಪಡೆದುಕೊಂಡಿತು.