ಗಂಗಾವತಿ/ಕೊಪ್ಪಳ: ಇಲ್ಲಿನ ಕೇಂದ್ರ ಬಸ್ ನಿಲ್ದಾಣ ಅವ್ಯವಸ್ಥೆಗಳ ಆಗರವಾಗಿದೆ. ಮುರಿದ ಆಸನಗಳು, ಧೂಳು ಹಿಡಿದ ನೆಲಹಾಸು, ನಿಲ್ದಾಣದ ಕಟ್ಟಡದ ಮೂಲೆಗಳಲ್ಲಿ ಕಟ್ಟಿದ ಜೇಡರ ಬಲೆ, ತುಕ್ಕು ಹಿಡಿದ ಕುಡಿಯುವ ನೀರಿನ ನಲ್ಲಿಗಳು... ಹೀಗೆ ಸಾಲು ಸಾಲು ಸಮಸ್ಯೆಗಳು ಪ್ರಯಾಣಿಕರನ್ನು ಹೈರಾಣಾಗಿಸುತ್ತಿವೆ.
ಅವ್ಯವಸ್ಥೆಗಳ ಆಗರವಾದ ಗಂಗಾವತಿ ಕೇಂದ್ರ ಬಸ್ ನಿಲ್ದಾಣ! - ಬಸ್ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ
ಶೌಚಾಲಯದ ತ್ಯಾಜ್ಯ ನೀರು ಬಸ್ ನಿಲ್ದಾಣದೊಳಕ್ಕೆ ಹರಿದು ಬರುತ್ತಿದ್ದು, ಗಂಗಾವತಿಯ ಕೇಂದ್ರ ಬಸ್ ನಿಲ್ದಾಣ ಅವ್ಯವಸ್ಥೆಗಳ ಆಗರವಾಗಿದೆ.
![ಅವ್ಯವಸ್ಥೆಗಳ ಆಗರವಾದ ಗಂಗಾವತಿ ಕೇಂದ್ರ ಬಸ್ ನಿಲ್ದಾಣ!](https://etvbharatimages.akamaized.net/etvbharat/prod-images/768-512-4733989-thumbnail-3x2-surya.jpeg)
ಅವ್ಯವಸ್ಥೆಗಳ ಆಗರವಾದ ಗಂಗಾವತಿ ಕೇಂದ್ರ ಬಸ್ ನಿಲ್ದಾಣ
ಅವ್ಯವಸ್ಥೆಗಳ ಆಗರವಾದ ಗಂಗಾವತಿ ಕೇಂದ್ರ ಬಸ್ ನಿಲ್ದಾಣ
ಇಷ್ಟು ಮಾತ್ರವಲ್ಲದೇ ಶೌಚಾಲಯದ ತ್ಯಾಜ್ಯ ನೀರು ಬಸ್ ನಿಲ್ದಾಣದೊಳಕ್ಕೆ ಹರಿದು ಬರುತ್ತಿದ್ದು, ಈ ನೀರಿನಲ್ಲಿ ವಾಹನಗಳು ಮತ್ತು ಪ್ರಯಾಣಿಕರು ಓಡಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಅಷ್ಟೇ ಅಲ್ಲ ಮಳೆ ಬಂದರೆ ಸಾಕು ಚರಂಡಿ ನೀರು ಕೂಡ ನಿಲ್ದಾಣದೊಳಗೆ ಹರಿಯುತ್ತದೆ. ಇನ್ನು ಈ ಬಗ್ಗೆ ಸ್ಥಳೀಯ ಸಾರಿಗೆ ಘಟಕದ ವ್ಯವಸ್ಥಾಪಕ ಆರ್.ಎಸ್.ಸೊನ್ನದ ಅವರನ್ನು ಕೇಳಿದ್ರೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.