ಗಂಗಾವತಿ: ಇಡೀ ದೇಶಾದ್ಯಂತ ಸಂಚಲನ ಸೃಷ್ಟಿಸಿರುವ ದಿ ಕಾಶ್ಮೀರ್ ಫೈಲ್ಸ್ ಚಿತ್ರ ವೀಕ್ಷಣೆಗೆ ನಗರದಲ್ಲಿ ಸಾವಿರಾರು ಜನ ಮುಗಿ ಬಿದ್ದ ಪರಿಣಾಮ ನೂಕುನುಗ್ಗಲು ಉಂಟಾದ ಘಟನೆ ನಡೆಯಿತು.
ನಗರದ ಪೂರ್ಣಿಮಾ (ಕನಕದುರ್ಗಾ) ಮಂದಿರದಲ್ಲಿ ಉಚಿತ ಚಿತ್ರ ವೀಕ್ಷಣೆಗೆ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ವ್ಯವಸ್ಥೆ ಮಾಡಿದ್ದರು. ಆದರೆ, ಮಹಿಳೆಯರು ಸೇರಿದಂತೆ ಸಾವಿರಾರು ಜನ ಆಸನ ಸಿಗದೇ ಪರದಾಡಿದ ಪ್ರಸಂಗ ನಡೆಯಿತು. ಕೇವಲ ಇನ್ನೂರು ಜನರಿಗೆ ಅವಕಾಶ ಸಿಕ್ಕ ಪರಿಣಾಮ ನೂರಾರು ಜನ ನಿರಾಶೆಯಿಂದ ವಾಪಸಾದರು.