ಕುಷ್ಟಗಿ(ಕೊಪ್ಪಳ) : ಕುಷ್ಟಗಿ ತಾಲೂಕಿನ ಜೆ.ರಾಂಪೂರ ಗ್ರಾಮದ ಯುವಕ ಸಿಡಿಲಿನಿಂದ ಕೂದಲೆಳೆ ಅಂತರದಲ್ಲಿ ಪಾರಾಗಿರುವ ಘಟನೆ ನಡೆದಿದೆ. ಕಳೆದ ಶನಿವಾರ ಸಂಜೆ ಬಸವರಾಜ್ ಅಮರಪ್ಪ ಕುಲಕರ್ಣಿ ಎಂಬಾತ ಕೆಲಸ ಮುಗಿಸಿ ಬೈಕಿನಲ್ಲಿ ಬರುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.
ಮರದಡಿ ನಿಂತಾಗಲೇ ಬಡಿಯಿತು ಸಿಡಿಲು : ಕೂದಲೆಳೆ ಅಂತರದಲ್ಲಿ ಪಾರಾದ ವ್ಯಕ್ತಿ - ಕುಷ್ಟಗಿ ಸುದ್ದಿ
ಮಳೆ ಎದುರಾದ ಹಿನ್ನೆಲೆ ಮರದ ಅಡಿ ಆಶ್ರಯ ಪಡೆದಿದ್ದರು. ಈ ವೇಳೆ ಅವರ ಪಕ್ಕದಲ್ಲೇ ಸಿಡಿಲು ಬಡಿದಿದ್ದು, ಸಿಡಿಲಿನ ತೀವ್ರತೆಗೆ ಬೈಕ್ ಮಿರರ್ ಸಂಪೂರ್ಣ ಒಡೆದು ಹೋಗಿತ್ತು..
ಮರದಡಿ ನಿಂತಾಗಲೇ ಬಡಿಯಿತು ಸಿಡಿಲು:
ಮಳೆ ಎದುರಾದ ಹಿನ್ನೆಲೆ ಮರದ ಅಡಿ ಆಶ್ರಯ ಪಡೆದಿದ್ದರು. ಈ ವೇಳೆ ಅವರ ಪಕ್ಕದಲ್ಲೇ ಸಿಡಿಲು ಬಡಿದಿದ್ದು, ಸಿಡಿಲಿನ ತೀವ್ರತೆಗೆ ಬೈಕ್ ಮಿರರ್ ಸಂಪೂರ್ಣ ಒಡೆದು ಹೋಗಿತ್ತು.
ಅದೃಷ್ಟವಶಾತ್ ಪ್ರಾಣ ಹಾನಿಯಾಗಿರಲಿಲ್ಲ. ಆದರೆ, ಕಾಲುಗಳು ಸ್ವಾಧೀನ ಕಳೆದುಕೊಂಡಂತೆ ಭಾಸವಾಗಿದ್ದು, ತಕ್ಷಣ ಕುಷ್ಟಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.