ಗಂಗಾವತಿ(ಕೊಪ್ಪಳ):ಸ್ನೇಹಿತನ ಬೈಕ್ ತೆಗೆದುಕೊಂಡು ಹೋಗಿ ತಡವಾಗಿ ತಂದು ಕೊಟ್ಟಿದ್ದನ್ನು ಪ್ರಶ್ನಿಸಿದ್ದಕ್ಕೆ ಕುಪಿತನಾದ ವ್ಯಕ್ತಿ ತಮ್ಮ ಸ್ನೇಹಿತನಾದ ಬೈಕ್ ಮಾಲೀಕನ ಮೇಲೆ ಚಾಕುವಿನಿಂದ ಇರಿದು ಕೊಲೆ ಘಟನೆ ಕನಕಗಿರಿಯಲ್ಲಿ ನಡೆದಿದೆ. ಪಟ್ಟಣದ ಸಪ್ಲಯರ್ಸ್ (ಶಾಮಿಯಾನ) ಅಂಗಡಿ ಮಾಲೀಕ ರವೀಂದ್ರ ಕುಮಾರ ಮಹಾಂತಪ್ಪ ದೋಟಿಹಾಳ (31) ಕೊಲೆಯಾದ ವ್ಯಕ್ತಿ. ಮುತ್ತು ಈರಪ್ಪ ಹಡಪದ ಕೊಲೆಗೈದ ಆರೋಪಿ.
ಪ್ರಕರಣದ ವಿವರ:ಮುತ್ತು ಮತ್ತು ರವೀಂದ್ರ ಇಬ್ಬರು ಗೆಳೆಯರು. ಆಕಸ್ಮಿಕ ಕೆಲಸದ ಅಂಗವಾಗಿ ಮುತ್ತು ಅರ್ಧ ಗಂಟೆಯಲ್ಲಿ ವಾಪಸ್ ಬರುವುದಾಗಿ ರವೀಂದ್ರ ಅವರ ಬೈಕ್ ತೆಗೆದುಕೊಂಡು ಹೋಗಿದ್ದಾರೆ. ಬಳಿಕ ತುಂಬಾ ತಡವಾಗಿ ಬೈಕ್ನ್ನು ತಂದು ಕೊಟ್ಟಿದ್ದಾರೆ. ಈ ಬಗ್ಗೆ ರವೀಂದ್ರ ಪ್ರಶ್ನಿಸಿದ್ದಕ್ಕೆ ಮುತ್ತು ಕುಪಿತರಾಗಿ ರವೀಂದ್ರ ಮೇಲೆ ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾರೆ. ಇದರಿಂದ ತೀವ್ರ ಗಾಯಗೊಂಡ ರವೀಂದ್ರ ಅವರಿಗೆ ಕನಕಗಿರಿಯ ಸಮುದಾಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ.