ಕರ್ನಾಟಕ

karnataka

ETV Bharat / state

ಹರಿಯಾಣದಿಂದ ಬಂದು ಕನ್ನಡ ಕಲಿತ ಸರ್ದಾರ್​ಜಿ.. - ಕೊಪ್ಪಳ ಸುದ್ದಿ

ದೂರದ ಹರಿಯಾಣದಿಂದ ಕಳೆದ 8 ವರ್ಷಗಳ ಹಿಂದೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ನೆಲೆಸಿ ಕೃಷಿ ಕಾರ್ಯದಲ್ಲಿ ತೊಡಗಿರುವ ಸರ್ದಾರ್​ಜಿವೋರ್ವರು ತಮ್ಮ ಕೂಲಿ ಕೆಲಸಗಾರರಿಂದ ಕನ್ನಡ ಕಲಿತು, ಕನ್ನಡ ಭಾಷೆಯ ಬಗ್ಗೆ ಅಭಿಮಾನ ಹೊಂದಿದ್ದಾರೆ.

kannada
kannada

By

Published : Nov 1, 2020, 6:22 AM IST

Updated : Nov 1, 2020, 6:42 AM IST

ಕೊಪ್ಪಳ:ವ್ಯವಹಾರಕ್ಕಾಗಿಯೋ, ಜೀವನಕ್ಕಾಗಿಯೋ ಅನ್ಯ ನೆಲದಲ್ಲಿ ಅಲ್ಲಿನ ಭಾಷೆ ಕಲಿಯುವುದು ಅನಿವಾರ್ಯ. ಆದರೆ, ಹೀಗೆ ಕಲಿತ ಭಾಷೆಯನ್ನು ವ್ಯವಹಾರದಾಚೆಯೂ ಪ್ರೀತಿಸುವುದು ಅಭಿಮಾನ.

ಸುಲಲಿತವಾಗಿರುವ ಕನ್ನಡ ಭಾಷೆಯನ್ನು ಅಭಿಮಾನದಿಂದ ಮಾತನಾಡುವವರು ರಾಜ್ಯದಲ್ಲಿ ಅನೇಕ ಅನ್ಯ ರಾಜ್ಯದ ಜನರು ಇದ್ದಾರೆ. ಅಂತಹ ಅನ್ಯ ರಾಜ್ಯದ ಈ ವ್ಯಕ್ತಿ ತನ್ನ ಕೂಲಿ ಕೆಲಸಗಾರರಿಂದ ಕನ್ನಡ ಕಲಿತು, ಕನ್ನಡ ಭಾಷೆಯ ಬಗ್ಗೆ ಅಭಿಮಾನ ಹೊಂದಿದ್ದಾರೆ.

ದೂರದ ಹರಿಯಾಣದಿಂದ ಕಳೆದ 8 ವರ್ಷಗಳ ಹಿಂದೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ನೆಲೆಸಿ ಕೃಷಿ ಕಾರ್ಯದಲ್ಲಿ ತೊಡಗಿರುವ ಈ ಸರ್ದಾರ್​ಜಿಯ ಹೆಸರು ಲಖವೀರ ಸಿಂಗ್‌. ಅವರು ಕನ್ನಡ ಕಲಿತದ್ದು ವಿಶೇಷ. ತಮ್ಮ ಮಾತೃ ಭಾಷೆಯಾದ ಪಂಜಾಬಿ ಜೊತೆಗೆ ಕನ್ನಡ ಕಲಿತು ಕನ್ನಡ ಭಾಷೆಯ ಕಲಿಕೆ ಬಗ್ಗೆ ಅತ್ಯಂತ ಆಭಿಮಾನ ಮೂಡಿಸಿಕೊಂಡಿದ್ದಾರೆ.

ಕನ್ನಡ ಕಲಿತ ಸರ್ದಾರ್​​ಜಿ

ಲಖವೀರ್ ಸಿಂಗ್ ಅವರು ಕನ್ನಡ ಕಲಿತಿದ್ದು, ತಮ್ಮ ತೋಟಕ್ಕೆ ಬರುತ್ತಿದ್ದ ಅನಕ್ಷರಸ್ಥ ಕೃಷಿ ಕೂಲಿ ಕೆಲಸಗಾರರಿಂದ ಅನ್ನೋದು ವಿಶೇಷ. ಕೃಷಿ ಕೂಲಿಕಾರ್ಮಿಕರು ಲಖವೀರ ಸಿಂಗ್ ಅವರಿಗೆ ನಿತ್ಯ ಕನ್ನಡದಲ್ಲಿಯೇ ಕೆಲಸ ಕಾರ್ಯಗಳ ಬಗ್ಗೆ ಹೇಳುತ್ತಿದ್ದರು. ಹೀಗೆ ಕೃಷಿ ಕೂಲಿಕಾರ್ಮಿಕರು ಕನ್ನಡ ಮಾತನಾಡಿ ಲಖವೀರ ಸಿಂಗ್ ಅವರಿಗೆ ಕನ್ನಡವನ್ನು ಸರಳವಾಗಿ, ಸುಲಲಿತವಾಗಿ ಮಾತನಾಡುವಷ್ಟು ತಯಾರು ಮಾಡಿದ್ದಾರೆ.

ಹೀಗಾಗಿ ಲಖವೀರ ಸಿಂಗ್ ಅವರು ಕನ್ನಡವನ್ನು ಸ್ಪಷ್ಟವಾಗಿ ಮಾತನಾಡುತ್ತಿದ್ದಾರೆ. ಕೆಲವೊಂದು ಪದಪ್ರಯೋಗದ ಉಚ್ಚಾರಣೆಯಲ್ಲಿ ಸ್ವಲ್ಪ ಭಿನ್ನತೆ ಕಂಡರೂ ಅವರ ಕನ್ನಡ ಪ್ರೀತಿಯನ್ನು ಮೆಚ್ಚಬೇಕು. ತಮ್ಮನ್ನು ಭೇಟಿಯಾಗುವ, ಜಮೀನಿನಲ್ಲಿ ಕೆಲಸ ಮಾಡುವ ಜನರೊಂದಿಗೆ ಕನ್ನಡದಲ್ಲಿಯೇ ವ್ಯವಹರಿಸುತ್ತಾರೆ.

ಕನ್ನಡ ಮಾತನಾಡುವುದು ಎಂದರೆ ನನಗೆ ಸಂತೋಷವಾಗುತ್ತದೆ. ಹೀಗಾಗಿ ನಾನು ಕನ್ನಡವನ್ನು ಕಲಿತು ಕನ್ನಡವನ್ನೇ ಮಾತನಾಡುತ್ತೇನೆ ಎಂದು ಸಂತಸದಿಂದ‌ ಹೇಳ್ತಾರೆ ಲಖವೀರ ಸಿಂಗ್‌. ಈ ನೆಲದಲ್ಲಿಯೇ ಜನಿಸಿ ಕನ್ನಡ ಮರೆತು ಅನ್ಯಭಾಷೆಯ ಬಗ್ಗೆ ವ್ಯಾಮೋಹ, ಪ್ರೀತಿ ಹೊಂದಿರುವ ನಿರಭಿಮಾನಿಗಳ ಮುಂದೆ ಲಖವೀರ ಸಿಂಗ್​ರಂತಹ ಅನ್ಯರಾಜ್ಯದ ಕನ್ನಡ ಅಭಿಮಾನಿಗಳಿರುವುದು ವಿಶೇಷ ಎನಿಸುತ್ತದೆ.

Last Updated : Nov 1, 2020, 6:42 AM IST

ABOUT THE AUTHOR

...view details