ಕರ್ನಾಟಕ

karnataka

ETV Bharat / state

ಕಬ್ಬರಗಿ ಕಪಿಲತೀರ್ಥದಲ್ಲಿ ಕಾಲು ಜಾರಿ ಬಿದ್ದು ಮೂರ್ಛೆ ರೋಗಿ ಸಾವು - ಕಬ್ಬರಗಿ ಕಪಿಲತೀರ್ಥದಲ್ಲಿ ಕಾಲು ಜಾರಿ ಬಿದ್ದು ಮೂರ್ಛೆ ರೋಗಿ ಸಾವು ಸುದ್ದಿ

ಕುಷ್ಟಗಿ ತಾಲೂಕಿನ ಕಬ್ವರಗಿಯ ಕಪಿಲತೀರ್ಥ ಜಲಪಾತದಲ್ಲಿ ನೀರು ಕುಡಿಯಲು ಹೋಗಿದ್ದಾಗ ಮೂರ್ಛೆ ಬಂದು ಜಾರಿ ಬಿದ್ದ ವ್ಯಕ್ತಿ ಸಾವನ್ನಪ್ಪಿದ್ದಾರೆ.

ಕಪಿಲತೀರ್ಥದಲ್ಲಿ ಕಾಲು ಜಾರಿ ಬಿದ್ದು ಮೂರ್ಛೆ ರೋಗಿ ಸಾವು
ಕಪಿಲತೀರ್ಥದಲ್ಲಿ ಕಾಲು ಜಾರಿ ಬಿದ್ದು ಮೂರ್ಛೆ ರೋಗಿ ಸಾವು

By

Published : Nov 22, 2021, 10:41 PM IST

ಕುಷ್ಟಗಿ (ಕೊಪ್ಪಳ): ಕುಷ್ಟಗಿ ತಾಲೂಕಿನ ಕಬ್ವರಗಿಯ ಕಪಿಲತೀರ್ಥ (ಕಪಲೆಪ್ಪ) ಜಲಪಾತದಲ್ಲಿ ಮೂರ್ಛೆ ರೋಗಿ ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.

ಮೃತ ವ್ಯಕ್ತಿಯನ್ನು ಹುಲಗಪ್ಪ ನಾಗಪ್ಪ ವಡ್ಡರ (27) ಎಂದು ಗುರುತಿಸಲಾಗಿದೆ. ಇವರು ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಕಲ್ಲೂರು ನಿವಾಸಿಯಾಗಿದ್ದು, ಸದ್ಯ ಯಲಬುರ್ಗಾ ತಾಲೂಕು ಮುಧೋಳ ಗ್ರಾಮದಲ್ಲಿ ವಾಸವಾಗಿದ್ದರು.

ಪತ್ನಿ ಭಾಗ್ಯ, ಮಗಳ ಜತೆ ಹನುಮಸಾಗರದ ದೊಡ್ಡಮ್ಮನ ಮನೆಗೆ ಆಗಮಿಸಿದ್ದರು. ನ.22ರಂದು ಕುಟುಂಬ ಸಮೇತರಾಗಿ ಕಬ್ಬರಗಿ ಕಪಿಲತೀರ್ಥ ಜಲಪಾತಕ್ಕೆ ತೆರಳಿದ್ದರು. ಹುಲಗಪ್ಪ ವಡ್ಡರಗೆ‌‌ ಮೊದಲೇ ಮೂರ್ಛೆ ರೋಗ ಇತ್ತು. ಆದರೂ ಜಲಪಾತದಲ್ಲಿ ನೀರು ಕುಡಿಯಲು ಹೋಗಿದ್ದಾಗ ಮೂರ್ಛೆ ಬಂದು ಜಾರಿ ಬಿದ್ದಿದ್ದಾರೆ. ಈ ವೇಳೆ ಚೂಪಾದ ಕಲ್ಲು ತಲೆಗೆ ತಾಗಿದೆ.

ಹನುಮಸಾಗರ ಸರ್ಕಾರಿ ಆಸ್ಪತ್ರೆಗೆ ಕರೆ ತರುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ ಎಂದು ಕುಷ್ಟಗಿ ಸಿಪಿಐ ನಿಂಗಪ್ಪ ರುದ್ರಪ್ಪಗೋಳ ಮಾಹಿತಿ ನೀಡಿದ್ದಾರೆ. ಮೃತ ಹುಲಗಪ್ಪ ಪತ್ನಿ ಭಾಗ್ಯ ದೂರಿನ ಮೇರೆಗೆ ಹನುಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪಿಎಸೈ ಅಶೋಕ ಬೇವೂರು ಮಾಹಿತಿ ನೀಡಿದರು.

ABOUT THE AUTHOR

...view details