ಕರ್ನಾಟಕ

karnataka

ETV Bharat / state

ಹೆಂಡತಿ ಕಾಟಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನ: ಕುಷ್ಟಗಿಯಲ್ಲಿ ವ್ಯಕ್ತಿಯ ರಂಪಾಟ - man attempted suicide

ಹೆಂಡತಿಯ ಕಾಟದಿಂದ ಬೇಸತ್ತ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

uicide
ರಂಪಾಟ

By

Published : Jan 27, 2021, 7:03 PM IST

Updated : Jan 27, 2021, 8:14 PM IST

ಕುಷ್ಟಗಿ/ಕೊಪ್ಪಳ: ಪತ್ನಿ‌ ಕಿರುಕುಳದಿಂದ ಬೇಸತ್ತು ವ್ಯಕ್ತಿಯೊಬ್ಬ ತಾಲೂಕು ಸರ್ಕಾರಿ ಆಸ್ಪತ್ರೆ ಮೇಲಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಪ್ರಸಂಗ ನಡೆದಿದೆ.

ಹೆಂಡತಿ ಕಾಟಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನ

ತಾಲೂಕಿನ ಚಳಗೇರಾ ಗ್ರಾಮದ ಅಂಬಾಜಿರಾವ್ ಜವಳೇಕರ್ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದ. ಈ ವ್ಯಕ್ತಿ ಏಕಾಏಕಿ ಆಸ್ಪತ್ರೆಯ ಹೊಸ ಕ್ವಾಟ್ರಸ್​​ ಮೇಲೆ ಹತ್ತಿ ಕಿಟಕಿಯ‌ ಮೇಲ್ಛಾವಣಿಯ ಮೇಲೆ ಕುಳಿತು ಅಲ್ಲಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳವುದಾಗಿ ಹೆದರಿಸಿದ್ದ. ಘಟನೆಯಿಂದ ಗಾಬರಿಯಾದ ಆಸ್ಪತ್ರೆ ಸಿಬ್ಬಂದಿ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದರು. ಕೂಡಲೇ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ, ಆತನ ಮನವೊಲಿಸಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ.

ಮಾಧ್ಯಮದವರ ಬಳಿ ಹೇಳುವುದಿದೆ, ನನ್ನನ್ನು ಕೋರ್ಟ್​ಗೆ ಕರೆದೊಯ್ಯದಿದ್ದರೆ ನನ್ನ ಸಾವಿಗೆ ಆಸ್ಪತ್ರೆ ಸಿಬ್ಬಂದಿ ಹಾಗೂ ಪೊಲೀಸರು ಕಾರಣವಾಗುತ್ತಾರೆ. ನನ್ನ ವಿಡಿಯೋ ಮಾಡಿ ಜಾಲತಾಣಗಳಲ್ಲಿ ಹರಿಬಿಡಿ ಜಗತ್ತಿಗೆ ಗೊತ್ತಾಗಲಿ ಎಂದಿದ್ದಾನೆ. ನಿನ್ನ ಸಮಸ್ಯೆಗೆ ಸ್ಪಂದಿಸುವುದಾಗಿ ಮಾತನಾಡಿಸುತ್ತಲೇ ಏಣಿ ಬಳಸಿ ವ್ಯಕ್ತಿಯನ್ನು ರಕ್ಷಿಸಲಾಗಿದೆ.

Last Updated : Jan 27, 2021, 8:14 PM IST

ABOUT THE AUTHOR

...view details