ಕರ್ನಾಟಕ

karnataka

ETV Bharat / state

ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ: ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು - ಕುಷ್ಟಗಿ ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ

ವಿದ್ಯುತ್ ಪರಿವರ್ತಕದ ಸುತ್ತಲೂ ಮುಳ್ಳಿನ ಗಿಡಗಳು ಬೆಳೆದಿರುವ ಕುರಿತು ಮಾಹಿತಿ ನೀಡಿದರೂ ಕೂಡ ಜೆಸ್ಕಾಂ ಸಿಬ್ಬಂದಿ ಇತ್ತ ಸುಳಿದಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

Kustagi
Kustagi

By

Published : Aug 8, 2020, 1:12 PM IST

ಕುಷ್ಟಗಿ/ಕೊಪ್ಪಳ: ಕುಷ್ಟಗಿ ತಾಲೂಕಿನ ಮುದೇನೂರು ಗ್ರಾ.ಪಂ. ಬಳಿಯ ವಿದ್ಯುತ್ ಪರಿವರ್ತಕದ (ಟಿಸಿ) ಸುತ್ತಲು ಮುಳ್ಳಿನ ಗಿಡಗಳು ಬೆಳೆದು ನಿಂತಿದ್ದು, ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಟಿಸಿ ಸುತ್ತಲು ಮುಳ್ಳಿನ ಗಿಡಗಳು ಬೆಳೆದಿರುವ ಕುರಿತು ಮಾಹಿತಿ ನೀಡಿದರೂ ಕೂಡ ಜೆಸ್ಕಾಂ ಸಿಬ್ಬಂದಿ ಇತ್ತ ಸುಳಿದಿಲ್ಲ ಎಂದು ತಿಳಿಸಿದರು.

ಗಿಡಗಳು ಹಸಿಯಾಗಿರುವುದರಿಂದ ವಿದ್ಯುತ್ ಪ್ರವಹಿಸಿ ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚಿದೆ. ಟಿಸಿ ಸುತ್ತಲು ಬೆಳೆದಿರುವ ಮುಳ್ಳು ಕಂಟಿಗಳನ್ನು ತೆರವುಗೊಳಿಸಿ ಭವಿಷ್ಯದಲ್ಲಿ ಯಾವುದೇ ಜೀವ ಹಾನಿ ಸಂಭವಿಸದಂತೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರಾದ ಚಂದ್ರು ಕುಂಬಾರ ಒತ್ತಾಯಿಸಿದರು.

For All Latest Updates

TAGGED:

ABOUT THE AUTHOR

...view details