ಗಂಗಾವತಿ: ಜನೌಷಧಿ ಮಳಿಗೆಯೊಂದರಲ್ಲಿ ಮೇಡ್ ಇನ್ ಚೀನಾ ಎಂದಿರುವ ಮಾಸ್ಕ್‌ಗಳನ್ನು ಮಾರಾಟ ಮಾಡುತ್ತಿರುವುದು ಸಾರ್ವಜನಿಕರ ವಿರೋಧಕ್ಕೆ ಕಾರಣವಾಗಿದೆ.
ಗಂಗಾವತಿಯ ಜನೌಷಧಿ ಮಳಿಗೆಯಲ್ಲಿ ಚೀನಾ ತಯಾರಿಸಿದ ಮಾಸ್ಕ್ ಮಾರಾಟ
ಗಂಗಾವತಿಯ ಜನೌಷಧಿ ಮಳಿಗೆಯೊಂದರಲ್ಲಿ ಮೇಡ್ ಇನ್ ಚೀನಾದ ಮಾಸ್ಕ್‌ಗಳ ಮಾರಾಟ ನಡೆಯುತ್ತಿದೆ.
ಪಂಪಾನಗರದ ವೃತ್ತದಲ್ಲಿರುವ ಕೇಂದ್ರ ಸರ್ಕಾರದ ಮಳಿಗೆಯಲ್ಲಿ ವ್ಯಕ್ತಿಯೊಬ್ಬರು ಮಾಸ್ಕ್ ಖರೀದಿಸಿ ಪರಿಶೀಲಿಸಿದಾಗ ಅದರಲ್ಲಿ ಚೀನಾದಲ್ಲಿ ತಯಾರಿಸಿದ್ದು ಎಂದು ಬರೆದಿತ್ತು. ಈ ಕುರಿತಂತೆ ಮಳಿಗೆಯ ಮಾಲೀಕನ ವಿಚಾರಣೆ ನಡೆಸಿದಾಗ ಆತ, ಇದು ತನ್ನ ಅಂಗಡಿಯಲ್ಲಿ ಖರೀದಿಸಿದ್ದಲ್ಲ ಎಂದು ಹೇಳಿದ್ದಾನೆ. ಇದನ್ನು ಒಪ್ಪದ ಗ್ರಾಹಕ ಸಿಸಿ ಕ್ಯಾಮೆರಾದ ದೃಶ್ಯಾವಳಿ ಪರಿಶೀಲಿಸುವಂತೆ ಕೋರಿದ್ದಾರೆ. ಆಗ ಯಾರೋ ಆಶಾ ಕಾರ್ಯಕರ್ತರೊಬ್ಬರು ತಂದುಕೊಟ್ಟಿದ್ದಾರೆ ಸಬೂಬು ಹೇಳಿದ್ದ.
ಚೀನಾದ ಎಲ್ಲಾ ಆ್ಯಪ್‌ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಆದರೆ ಕೇಂದ್ರ ಸರ್ಕಾರದ ಅಂಗಡಿಯಲ್ಲಿ ಚೀನಾ ಮೇಡ್ ಮಾಸ್ಕ್‌ಗಳ ಮಾರಾಟ ನಡೆಯುತ್ತಿದೆ.