ಕರ್ನಾಟಕ

karnataka

ETV Bharat / state

ಅನ್ಯಕೋಮಿನ ಯುವತಿ ಜೊತೆ ಪ್ರೀತಿ-ಪ್ರೇಮ-ಪ್ರಣಯ: ತೋಟದಲ್ಲಿ ಬಿತ್ತು ಯುವಕನ ಹೆಣ - Hanumesha Hanumantha (22) murder

ಕಳೆದ ಆರು ತಿಂಗಳ ಹಿಂದೆ ಯುವತಿಯ ತಂದೆ ಹಾಗೂ ಕುಟುಂಬಸ್ಥರು ಎಚ್ಚರಿಕೆ ನೀಡಿದ್ದರಂತೆ. ಆದರೆ, ಪ್ರೇಮಿಗಳ ಮಧ್ಯೆ ಪ್ರೀತಿ ಮುಂದುವರೆದ ಪರಿಣಾಮ ಮಂಗಳವಾರ ರಾತ್ರಿ ಹನ್ನೊಂದು ಗಂಟೆಯ ಸುಮಾರಿಗೆ ಯುವಕನನ್ನು ಕರೆದೊಯ್ದು ಕೊಲೆ ಮಾಡಲಾಗಿದೆ ಎಂಬ ಮಾಹಿತಿ ದೊರೆತಿದೆ.

crime
ಕೊಲೆ

By

Published : Jul 28, 2021, 6:39 PM IST

ಗಂಗಾವತಿ: ಪ್ರೀತಿಯ ಪಯಣದಲ್ಲಿದ್ದ ಪ್ರೇಮಿಯೊಬ್ಬ ದಿಢೀರ್ ಎಂದು ಮಾವಿನ ತೋಪಿನಲ್ಲಿ ಕೊಲೆಗೀಡಾದ ಘಟನೆ ತಾಲೂಕಿನ ಸಂಗಾಪುರದಲ್ಲಿ ನಡೆದಿದೆ.

ಕೊಲೆಯಾದ ವ್ಯಕ್ತಿಯನ್ನು ಸಂಗಾಪುರ ಗ್ರಾಮದ ಒಂದನೇ ವಾರ್ಡ್​ನ ನಿವಾಸಿ ಹನುಮೇಶ ಹನುಮಂತ (22) ಎಂದು ಗುರುತಿಸಲಾಗಿದೆ. ಈ ಯುವಕ ಇದೇ ಗ್ರಾಮದ ಅನ್ಯಕೋಮಿನ ಯುವತಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ.

ಕಳೆದ ಆರು ತಿಂಗಳ ಹಿಂದಷ್ಟೇ ಯುವತಿಯ ತಂದೆ ಹಾಗೂ ಕುಟುಂಬಿಕರು ಎಚ್ಚರಿಕೆ ನೀಡಿದ್ದಾರೆ. ಆದರೆ, ಪ್ರೇಮಿಗಳ ಮಧ್ಯೆ ಪ್ರೀತಿ ಮುಂದುವರೆದ ಪರಿಣಾಮ ಮಂಗಳವಾರ ರಾತ್ರಿ ಹನ್ನೊಂದು ಗಂಟೆಯ ಸುಮಾರಿಗೆ ಯುವಕನನ್ನು ಅನ್ಯ ನೆಪವೊಡ್ಡಿ ಕರೆದೊಯ್ದು ಕೊಲೆ ಮಾಡಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಇದನ್ನೂ ಓದಿ:ರಾಜ್ಯಾದ್ಯಂತ ಬಹುತೇಕ ಕಡೆ ಮಾನ್ಸೂನ್ ದುರ್ಬಲ: ಕರಾವಳಿಯಲ್ಲಿ ಮುಂದುವರೆಯಲಿದೆ ಮಳೆಯ ಆರ್ಭಟ

ABOUT THE AUTHOR

...view details