ಕರ್ನಾಟಕ

karnataka

ETV Bharat / state

ಲಾಕ್​​​​ಡೌನ್ ಎಫೆಕ್ಟ್: ಮಡಿವಾಳರ ಸಂಕಷ್ಟ ಕೇಳೋರ್ಯಾರು..! - ಮಡಿವಾಳರ ಸಂಕಷ್ಟ ಕೇಳೋರ್ಯಾರು

ಲಾಕ್​​​​​ಡೌನ್ ಜಾರಿಯಾದಾಗಿನಿಂದ ಬಟ್ಟೆ ಒಗೆಯುವುದು, ಇಸ್ತ್ರಿ ಮಾಡುವ ಕಾಯಕ ವೃತ್ತಿ ನಂಬಿದ ಸಮುದಾಯ ಅಕ್ಷರಶಃ ಸಂಕಷ್ಟದಲ್ಲಿದೆ.

louckdown effect madivala workers problems
ಲಾಕ್ ಡೌನ್ ಎಫೆಕ್ಟ್: ಮಡಿವಾಳರ ಸಂಕಷ್ಟ ಕೇಳೋರ್ಯಾರು..!

By

Published : May 15, 2020, 9:39 PM IST

ಕುಷ್ಟಗಿ: ಲಾಕ್​ಡೌನ್ ಜಾರಿ ಆದಾಗಿನಿಂದ ಮಡಿವಾಳ ಸಮುದಾಯದ ವೃತ್ತಿಗಳಿಗೆ ತೀವ್ರ ಹಿನ್ನಡೆಯಾಗಿದೆ ಎಂದು ಸಂಕಷ್ಟ ನಿರತರು ಅಲವತ್ತುಕೊಂಡರು.

ಬಟ್ಟೆ ತೊಳೆದರೆ ಇಸ್ತ್ರಿ ಮಾಡಿದರೆ ಮಾತ್ರ ಜೀವನ ನಿರ್ವಹಣೆಯ ಸಂಕಷ್ಟದ ಕಾಲದಲ್ಲಿ ಲಾಕ್​​​ಡೌನ್ ಜಾರಿಯಿಂದ ಕೆಲಸವೇ ಇಲ್ಲ. ಖಾಲಿ ಕುಳಿತುಕೊಳ್ಳಲಾಗದೇ ಹೊಲ ಮನೆ ಕೆಲಸಮಾಡಿದ್ದು ಆಯ್ತು. ಕೊರೊನಾ ವಾರಿಯರ್ಸ್‌ ಆಗಿ ಕೆಲಸ ಮಾಡುವ ಪೊಲೀಸರು, ಗೃಹರಕ್ಷಕರು, ಅಗ್ನಿಶಾಮಕ ದಳದ ಸಿಬ್ಬಂದಿ ಅವರ ಬಟ್ಟೆ ತೊಳೆದುಕೊಟ್ಟಿದ್ದು, ಬಿಟ್ಟರೆ ದಿನದ ಆದಾಯವಿಲ್ಲ.

ಈ ಸಂಕಷ್ಟದ ಸಂದರ್ಭದಲ್ಲಿ ತಾಲೂಕು ಆಡಳಿತ, ದಾನಿಗಳು ಆಹಾರ ಸಾಮಗ್ರಿ ಕಿಟ್ ವಿತರಿಸಿದ್ದರು. ಆದರೆ, ಕೊರೊನಾ ಸಂದರ್ಭದಲ್ಲಿ ಬಟ್ಟೆ ತೊಳೆಯುವುದು, ಇಸ್ತ್ರಿ ಮಾಡುವುದು ಸವಾಲಿನ ಕೆಲಸವಾಗಿದೆ ಜೀವನಕ್ಕಾಗಿ ಜೀವ ಲೆಕ್ಕಿಸದೇ ಕೆಲಸ ಮಾಡಬೇಕಿದೆ.

ಕಷ್ಟಕರ ಜೀವನದ ಪರಿಸ್ಥಿತಿಯಲ್ಲಿ ಸಿಎಂ ಯಡಿಯೂರಪ್ಪ ಸರ್ಕಾರ 5 ಸಾವಿರ ರೂ. ಪರಿಹಾರ ಪ್ರಕಟಿಸಿರುವುದು ನೆಮ್ಮದಿ ನಿಟ್ಟುಸಿರು ಬಿಡುವಂತಾಗಿದೆ.

ABOUT THE AUTHOR

...view details