ಕುಷ್ಟಗಿ(ಕೊಪ್ಪಳ):ನಾಳೆ ನಡೆಯಲಿರುವ ಕುಷ್ಟಗಿ ತಾಲೂಕಿನ ಗುಮಗೇರಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿದಂತೆ ಹಲವು ಗೊಂದಲವುಗಳು ಮೂಡಿವೆ.
ಸದರಿ ಸಮ್ಮೇಳನದ ಆಮಂತ್ರಣದ ಪತ್ರಿಕೆ ಮಾ.1ರಂದು ಬಿಡುಗಡೆಗೊಳಿಸಲಾಗಿದ್ದು, ವಾಟ್ಸಪ್ನಲ್ಲಿ ಹಂಚಿಕೆಯಾಗುತ್ತಿವೆ. ಆಮಂತ್ರಣ ಪತ್ರಿಕೆಯಲ್ಲಿ ಆಮಂತ್ರಿತರಿಗೂ ಸಹ ವ್ಯಾಟ್ಸಪ್ ಮೂಲಕ ರವಾನಿಸಲಾಗುತ್ತಿದೆ. ನಾಳೆಯೇ(ಮಾ.3) ಸಮ್ಮೇಳನವಿದ್ದು, ಬಹುತೇಕ ಅಜೀವ ಸದಸ್ಯರಿಗೆ ಆಹ್ವಾನ ಪತ್ರಿಕೆ ತಲುಪಿಸುವ ಈ ಕಸರತ್ತು ನಡೆಸಿರುವುದು ಗೊತ್ತಾಗಿದೆ. ಸಮ್ಮೇಳನ ನಡೆಸಲು ಸಾಕಷ್ಟು ಸಮಯಾವಕಾಶ ಇದ್ದಾಗ್ಯೂ ತರಾತುರಿಯಲ್ಲಿ ಕಾಟಾಚಾರದ ಸಮ್ಮೇಳನ ಕಸಾಪ ಅಜೀವ ಸದಸ್ಯರನ್ನು ಪ್ರಶ್ನಿಸುವಂತೆ ಮಾಡಿದೆ.