ಕರ್ನಾಟಕ

karnataka

ETV Bharat / state

ತುಂಗಭದ್ರಾ ನದಿಗೆ ಉರುಳಿ ಬಿದ್ದ ಲಾರಿ, ಚಾಲಕ ಸಾವು - road accident

ಕೊಪ್ಪಳದಿಂದ ಹೊಸಪೇಟೆ ಕಡೆ ಹೊರಟಿದ್ದ ಲಾರಿ ನಿಯಂತ್ರಣ ತಪ್ಪಿ ಮುನಿರಾಬಾದ್​ ಬಳಿ ತುಂಗಭದ್ರಾ ನದಿ ಸೇತುವೆ ಮೇಲಿಂದ ಕೆಳಗುರಳಿ ಬಿದ್ದಿದೆ.

ತುಂಗಭದ್ರಾ ನದಿಗೆ ಉರುಳಿ ಬಿದ್ದ ಲಾರಿ
ತುಂಗಭದ್ರಾ ನದಿಗೆ ಉರುಳಿ ಬಿದ್ದ ಲಾರಿ

By ETV Bharat Karnataka Team

Published : Nov 8, 2023, 3:27 PM IST

Updated : Nov 8, 2023, 5:21 PM IST

ತುಂಗಭದ್ರಾ ನದಿಗೆ ಉರುಳಿ ಬಿದ್ದ ಲಾರಿ, ಚಾಲಕ ಸಾವು

ಕೊಪ್ಪಳ: ಚಾಲಕನ ನಿಯಂತ್ರಣ ತಪ್ಪಿ ತುಂಗಭದ್ರಾ ನದಿ ಸೇತುವೆ ಮೇಲಿಂದ ಲಾರಿ ಉರುಳಿ ಬಿದ್ದ ಪರಿಣಾಮ ಚಾಲಕ ಸಾವನ್ನಪ್ಪಿರುವ ಘಟನೆ ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿ ನಡೆದಿದೆ. ಕೊಪ್ಪಳದಿಂದ ಹೊಸಪೇಟೆ ಕಡೆ ಹೊರಟಿದ್ದ ಲಾರಿ ಅತಿಯಾದ ವೇಗದಿಂದಾಗಿ ಈ ಘಟನೆ ಜರುಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ಚಾಲಕ ಜಾರ್ಕಂಡ್ ರಾಜ್ಯದ ಭರತ ಸಿಂಗ್ (42) ಎಂಬುದಾಗಿ ತಿಳಿದು ಬಂದಿದೆ. ಈ ಬಗ್ಗೆ ಮುನಿರಾಬಾದ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ. ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರಲ್ಲಿ ನಿಂತಿದ್ದ ವಾಹನಕ್ಕೆ ಕ್ಯಾಂಟರ್ ಡಿಕ್ಕಿ: ನಿಂತಿದ್ದ ವಾಹನಕ್ಕೆ ಕ್ಯಾಂಟರ್ ಡಿಕ್ಕಿ ಹೊಡೆದ‌ ಪರಿಣಾಮ ಸ್ಥಳದಲ್ಲೇ ಚಾಲಕ ಸಾವನ್ನಪ್ಪಿರುವ ದುರ್ಘಟನೆ ತಲಘಟ್ಟಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ನಡೆದಿದೆ. ಸಂತೋಷ್ ನಾಯಕ್ ಸಾವನ್ನಪ್ಪಿರುವ ಕ್ಯಾಂಟರ್ ಚಾಲಕ. ನಿನ್ನೆ ರಾತ್ರಿ ನೈಸ್ ರೋಡ್ ನಾಗೇಗೌಡ ಪಾಳ್ಯ ಬ್ರಿಡ್ಜ್ ಬಳಿ ಘಟನೆ ನಡೆದಿದೆ. ಅತೀ ವೇಗವಾಗಿ ವಾಹನ ಚಲಾಯಿಸಿದ್ದರಿಂದ ಅಪಘಾತವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ನಿನ್ನೆ ರಾತ್ರಿ ಕ್ಯಾಂಟರ್ ಚಾಲಕ ಸಂತೋಷ್ ನಿಂತಿದ್ದ ಐಚರ್ ಗಾಡಿಗೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತ ಹಿನ್ನೆಲೆ ಸಂತೋಷ್ ಎರಡು ವಾಹನಗಳ ಮಧ್ಯೆ ಸಿಲುಕಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಹೊರತೆಗೆಯಲು ಸ್ಥಳೀಯರು ಹಾಗೂ ತಲ್ಲಘಟ್ಟಪುರ ಸಂಚಾರಿ ಪೊಲೀಸರು ಹರಸಾಹಸಪಡಬೇಕಾಯಿತು. ನಂತರ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲೇ ಸಂತೋಷ್ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.‌ ಈ ಕುರಿತು ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇತ್ತೀಚಿನ ಘಟನೆಗಳು:ಕಲಬುರಗಿಯಲ್ಲಿ ಕೆಲದಿನಗಳ ಹಿಂದೆ ಅಫಜಲಪುರ ಮತ್ತು ಬಳ್ಳೂರಗಿ ನಡುವಿನ ರಸ್ತೆಯ ಹಳ್ಳೋರಿ ಕ್ರಾಸ್ ಬಳಿ ಲಾರಿ ಹಾಗೂ ದ್ವಿಚಕ್ರ ವಾಹನದ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ನವವಿವಾಹಿತೆ ಸೇರಿ ಒಂದೇ ಕುಟುಂಬದ ಐವರು ಮೃತಪಟ್ಟಿರುವ ಘಟನೆ ನಡೆದಿತ್ತು. ಮೃತರನ್ನು ರತನ್ (25), ಪತ್ನಿ ಅಸ್ಮಿತ್ (21), ಮಕ್ಕಳಾದ ಧರಕನ್ (2), ಮಿಲನ್ (5) ಹಾಗೂ ಸ್ವಸ್ತಿಕಾ ಎಂದು ಗುರುತಿಸಲಾಗಿತ್ತು.

ಬೈಕ್​ ಮತ್ತು ಸಾರಿಗೆ ಬಸ್​ ನಡುವೆ ಅಪಘಾತ:ಕಳೆದ ಎರಡು ದಿನಗಳ ಹಿಂದೆರಾಯಚೂರುಜಿಲ್ಲೆಯ ಸಿರವಾರ ತಾಲೂಕಿನ ಅತ್ತನೂರು ಗ್ರಾಮದ ಹೊರವಲಯದ ಪೆಟ್ರೋಲ್ ಬಂಕ್​ ಬಳಿ ಬೈಕ್ ಹಾಗೂ ಸಾರಿಗೆ ಬಸ್ ನಡುವೆ ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ ಬೈಕ್​ ಸವಾರರಿಬ್ಬರು ಗಾಯಗೊಂಡಿದ್ದರು. ಬೈಕ್ ಸವಾರರು ಸಿರವಾರಕ್ಕೆ ತೆರಳುವಾಗ ಅತ್ತನೂರು ಗ್ರಾಮದ ಹೊರವಲಯದ ಬಂಕ್‌ನಲ್ಲಿ ಪೆಟ್ರೋಲ್ ಹಾಕಿಸಿಕೊಂಡು ಅಚಾತುರ್ಯದಿಂದ ರಸ್ತೆ ಕ್ರಾಸ್​ ಮಾಡುವಾಗ ಘಟನೆ ಸಂಭವಿಸಿತ್ತು.

ಇದನ್ನೂ ಓದಿ:ಬೈಕ್​ಗೆ ಕೇಂದ್ರ ಸಚಿವರ ಕಾರು ಡಿಕ್ಕಿ: ಓರ್ವ ವ್ಯಕ್ತಿ ಸಾವು, ನಾಲ್ವರಿಗೆ ಗಾಯ

Last Updated : Nov 8, 2023, 5:21 PM IST

ABOUT THE AUTHOR

...view details