ಕರ್ನಾಟಕ

karnataka

ETV Bharat / state

ಅಕ್ರಮ ಕಲ್ಲು ಗಣಿಗಾರಿಕೆ: ಲಾರಿ, ಟ್ರ್ಯಾಕ್ಟರ್ ವಶಕ್ಕೆ - ಅಕ್ರಮ ಕಲ್ಲು ಸಾಗಾಟ ಮಾಡುತ್ತಿದ್ದ ಲಾರಿ, ಟ್ರ್ಯಾಕ್ಟರ್ ವಶಕ್ಕೆ

ಗಂಗಾವತಿ ತಾಲೂಕಿನ ಸಂಗಾಪುರ ಗ್ರಾಮದಲ್ಲಿ ಅಕ್ರಮವಾಗಿ ಕಲ್ಲುಗಣಿಗಾರಿಕೆ ನಡೆಸುತ್ತಿರುವ ಖಚಿತ ಮಾಹಿತಿ ಮೇರೆಗೆ ತಹಶೀಲ್ದಾರ್ ಯು. ನಾಗರಾಜ್ ನೇತೃತ್ವದ ತಂಡ ನಡುರಾತ್ರಿ ದಾಳಿ ನಡೆಸಿ ಲಕ್ಷಾಂತರ ರೂ. ಮೌಲ್ಯದ ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಲಾರಿ, ಟ್ರ್ಯಾಕ್ಟರ್ ವಶಕ್ಕೆ
ಲಾರಿ, ಟ್ರ್ಯಾಕ್ಟರ್ ವಶಕ್ಕೆ

By

Published : Nov 27, 2021, 9:23 AM IST

ಗಂಗಾವತಿ: ತಾಲೂಕಿನ ಸಂಗಾಪುರ ಗ್ರಾಮದಲ್ಲಿ ಅಕ್ರಮವಾಗಿ ನಿಷೇಧಿತ ಸ್ಫೋಟಕಗಳನ್ನು ಬಳಸಿ ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಖಚಿತ ಮಾಹಿತಿ ಮೇರೆಗೆ ತಹಶೀಲ್ದಾರ್ ನೇತೃತ್ವದ ತಂಡ ದಾಳಿ ನಡೆಸಿ, ಮೂರು ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ತಹಶೀಲ್ದಾರ್ ಯು. ನಾಗರಾಜ್ ನೇತೃತ್ವದಲ್ಲಿ ನಡುರಾತ್ರಿ ದಾಳಿ ನಡೆಸಲಾಗಿದೆ. ಈ ವೇಳೆ ಲಕ್ಷಾಂತರ ರೂ. ಮೌಲ್ಯದ ಎಂಟು ನೂರಕ್ಕೂ ಹೆಚ್ಚು ಕಲ್ಲುಗಳು, ಎರಡು ಟ್ರ್ಯಾಕ್ಟರ್ ಮತ್ತು ಒಂದು ಲಾರಿಯನ್ನು ವಶಕ್ಕೆ ಪಡೆಯಲಾಗಿದೆ.

ಅಕ್ರಮ ಕಲ್ಲು ಗಣಿಗಾರಿಕೆ ಮೇಲೆ ದಾಳಿ

ಈ ಸಂಬಂಧ ಪ್ರಕರಣ ಪರಿಶೀಲಿಸುವಂತೆ ಕಂದಾಯ ಇಲಾಖೆಯ ಅಧಿಕಾರಿಗಳು, ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಪತ್ರ ಬರೆದಿದ್ದಾರೆ.

ಇದನ್ನೂ ಓದಿ:ಮತ್ತೊಬ್ಬನ ಪತ್ನಿ ಜೊತೆ ವಿವಾಹೇತರ ಸಂಬಂಧ: ರೆಡ್​​​ಹ್ಯಾಂಡ್​​ ಆಗಿ ಸಿಕ್ಕಿಬಿದ್ದ ಸಬ್‌ಇನ್ಸ್​​ಪೆಕ್ಟರ್​​ ಸಸ್ಪೆಂಡ್‌

ABOUT THE AUTHOR

...view details