ಕುಷ್ಟಗಿ:ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ-50ರ ಅಗ್ನಿಶಾಮಕ ಠಾಣೆಯ ಬಳಿ ಲಾರಿ ಮತ್ತು ಕಾರು ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ಜರುಗಿದೆ.
ಇಂದು ಸಂಜೆ 8 ಗಂಟೆಗೆ ಮಹಾರಾಷ್ಟ್ರ ಮೂಲದ ಕಾರು (ಎಂ.ಎಚ್-45, ಎನ್-7655) ಹೊಸಪೇಟೆ ಕಡೆಗೆ ಹೊರಟಿತ್ತು. ಏಕಮುಖ ರಸ್ತೆಯಲ್ಲಿ ನಿಯಮ ಮೀರಿ ಎದುರಿಗೆ ಬಂದ ಲಾರಿ, ಕಾರಿಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ ಮೂವರು ಪುರುಷರು ಸಾವನ್ನಪ್ಪಿದ್ದಾರೆ.