ಕರ್ನಾಟಕ

karnataka

ETV Bharat / state

ಬೈಕ್​​ನಿಂದ ಕೆಳಗೆ ಬಿದ್ದ ಮಹಿಳೆ.. ತಲೆಯ ಮೇಲೆ ಲಾರಿ ಹರಿದು ಸಾವು.. - lorry accedent women died

ಬೈಕ್​​​ ಚಾಲನೆಯಲ್ಲಿದ್ದಾಗ ಹಿಂಬದಿ ಕೂತಿದ್ದ ಮಹಿಳೆಯೊಬ್ಬರು ಕೆಳಗೆ ಬಿದ್ದು, ತಲೆಯ ಮೇಲೆ ಲಾರಿ ಹರಿದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಲಾರಿ ಹರಿದು ಸಾವು

By

Published : Sep 22, 2019, 7:58 PM IST

ಕೊಪ್ಪಳ:ತಲೆಯ ಮೇಲೆ ಲಾರಿ ಹರಿದು ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ತಾಲೂಕಿನ ದದೇಗಲ್ ಗ್ರಾಮದ ಬಳಿ ನಡೆದಿದೆ.

ಕುಕನೂರು ತಾಲೂಕಿನ ಮಸಬಹಂಚಿನಾಳ ಗ್ರಾಮದ ಕಾವೇರಿ ಕಮ್ಮಾರ್(39) ಸಾವನಪ್ಪಿರುವ ಮಹಿಳೆ. ಹೊಸಪೇಟೆಯಲ್ಲಿದ್ದ ಮಗನನ್ನು ನೋಡಿಕೊಂಡು ಪತಿಯೊಂದಿಗೆ ಹಿಂದಿರುಗಿ ಬರುವ ವೇಳೆ ಘಟನೆ ನಡೆದಿದೆ. ಬೈಕ್ ಚಾಲನೆಯಲ್ಲಿದ್ದಾಗ ಇದ್ದಕ್ಕಿದ್ದಂತೆ ಕಾವೇರಿ ಕೆಳಗೆ ಬಿದ್ದಿದ್ದಾರೆ‌. ಈ ವೇಳೆ ತೆಲೆಯ ಮೇಲೆ ಲಾರಿ ಹರಿದ ಪರಿಣಾಮ, ಕಾವೇರಿಯವರ ತಲೆ ಸಂಪೂರ್ಣ ಅಪ್ಪಚ್ಚಿಯಾಗಿ ಸ್ಥಳದಲ್ಲೇ ಸಾವನಪ್ಪಿದ್ದಾರೆ.ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details