ಕರ್ನಾಟಕ

karnataka

ETV Bharat / state

ಕೊಪ್ಪಳದಲ್ಲಿ ಲಾಕ್​ಡೌನ್ 3ನೇ ದಿನ: ಅನಗತ್ಯ ಓಡಾಟಕ್ಕಿಲ್ಲ ಅವಕಾಶ, ವಾಹನ ಜಪ್ತಿ - ಅನಗತ್ಯವಾಗಿ ಓಡಾಡುವವರಿಗೆ ಪೊಲೀಸರಿಂದ ತಾಕೀತು

ಜಿಲ್ಲೆಯಲ್ಲಿ ಬೆಳಗ್ಗೆಯೇ ಪೊಲೀಸರು ರಸ್ತೆಗಳಿದಿದ್ದು, ಅನಗತ್ಯವಾಗಿ ಓಡಾಡುವವರನ್ನು ತಡೆದು ಬಿಸಿ ಮುಟ್ಟಿಸುತ್ತಿದ್ದಾರೆ.

koppal
ಅನಗತ್ಯವಾಗಿ ಓಡಾಡುವವರಿಗೆ ಪೊಲೀಸರಿಂದ ತಾಕೀತು

By

Published : May 19, 2021, 10:05 AM IST

ಕೊಪ್ಪಳ:ಕೊರೊನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಕೊಪ್ಪಳದಲ್ಲಿ ಸಂಪೂರ್ಣ ಲಾಕ್​ಡೌನ್ ಜಾರಿಯಾಗಿದ್ದು, 3ನೇ ದಿನವಾದ ಇಂದು ಅನಗತ್ಯವಾಗಿ ಓಡಾಡುವ ಜನರನ್ನು ತಡೆಯುವ ಪೊಲೀಸರು ವಾಪಸ್‌ ಮನೆಗೆ ಕಳುಹಿಸುತ್ತಿದ್ದಾರೆ.

ಲಾಕ್​ಡೌನ್: ಅನಗತ್ಯವಾಗಿ ಓಡಾಡುವವರನ್ನು ತಡೆದು ವಿಚಾರಣೆಗೊಳಪಡಿಸುತ್ತಿರುವ ಪೊಲೀಸರು

ನಗರದ ಗಂಜ್ ಸರ್ಕಲ್ ಬಳಿ ನಾಯಿಯೊಂದಿಗೆ ವಾಕಿಂಗ್ ಬಂದಿದ್ದ ತಂದೆ, ಮಗಳನ್ನು ತಡೆದ ಪೊಲೀಸರು ಲಾಕ್​ಡೌನ್ ಇರುವುದು ಗೊತ್ತಿಲ್ವಾ?, ಹೀಗೆ ಹೊರಗಡೆ ಓಡಾಡುವುದರಿಂದ ಜನರು ನಮ್ಮನ್ನು ಪ್ರಶ್ನಿಸುತ್ತಾರೆ. ಯಾಕೆ ಹೊರಗಡೆ ಬಂದಿದ್ದೀರಿ ಎಂದರು. ಬಳಿಕ ನಾಯಿಯೊಂದಿಗೆ ತಂದೆ, ಮಗಳು ವಾಪಸ್ ಮನೆಗೆ ವಾಪಸ್ಸಾದರು.

ವಾಹನಗಳ ಜಪ್ತಿ:

ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಓಡಾಡುತ್ತಿದ್ದ ವಾಹನಗಳನ್ನು ಸೀಜ್ ಮಾಡಿ ಅನೇಕರಿಗೆ ದಂಡ ವಿಧಿಸಲಾಗಿದೆ. 239 ವಾಹನಗಳ ಸೀಜ್ ಮಾಡಿರುವ ಪೊಲೀಸರು ಮೋಟಾರು ವಾಹನ ಕಾಯ್ದೆ ಪ್ರಕಾರ 195 ಪ್ರಕರಣಗಳು, ವಿಪತ್ತು ನಿರ್ವಹಣೆ ಕಾಯ್ದೆ ಅಡಿ 1 ಹಾಗೂ ಮಾಸ್ಕ್ ಹಾಕದ 223 ಪ್ರಕರಣಗಳು ದಾಖಲಿಸಿದ್ದಾರೆ.

ಇದನ್ನೂ ಓದಿ:ಲಾಕ್​​​ಡೌನ್ ಎಫೆಕ್ಟ್: ಸಿಲಿಕಾನ್ ಸಿಟಿಯಲ್ಲಿ ಶೇ. 65ರಷ್ಟು ಮಾಲಿನ್ಯ ಪ್ರಮಾಣ ಇಳಿಕೆ

ABOUT THE AUTHOR

...view details