ಕುಷ್ಟಗಿ :ಗ್ರೀನ್ ಝೋನ್ ಜಿಲ್ಲೆಗಳಲ್ಲಿ ಲಾಕ್‌ಡೌನ್ ಸಡಿಲಿಕೆಯಿಂದ ಬ್ಯಾಕ್ ಟು ಬ್ಯುಸಿನೆಸ್ ಎನ್ನುವ ಸಮಾಧಾನದ ನಿಟ್ಟುಸಿರು ಒಂದೆಡೆಯಾದ್ರೆ, ಪುರಸಭೆ ಅಂಗಡಿಗಳ ಟ್ರೇಡ್ ಲೈಸೆನ್ಸ್ ತಲೆನೋವು ತಂದಿದೆ.
ಇದೆಲ್ಲ ಮುಗಿಯೋವರೆಗೂ ಬೇಡಪ್ಪಾ ಬೇಡ, ಟ್ರೇಡ್ ಲೈಸೆನ್ಸ್ ತಲೆನೋವು.. - ಲಾಕಡೌನ್ ರಿಲೀಫ್
ಗುರುವಾರ ಬೆಳಗ್ಗೆ ಭಾಗಶಃ ಅಂಗಡಿಗಳು ಆರಂಭಗೊಂಡವು. ಕೆಲ ಅಂಗಡಿಗಳು ಪುರಸಭೆ ಟ್ರೇಡ್ ಲೈಸೆನ್ಸ್ ಕಡ್ಡಾಯವಾಗಿದ್ದರಿಂದ ಪುರಸಭೆಯವರು ಅಂಗಡಿ ಬಂದ್ ಮಾಡಿಸಿದರು.
ಕುಷ್ಟಗಿ ವ್ಯಾಪಾರಸ್ಥರಿಗೆ ಟ್ರೇಡ್ ಲೈಸೆನ್ಸ್ ತಲೆನೋವು
ಬುಧವಾರ ತಾಪಂ ಸಭಾಂಗಣದಲ್ಲಿ ಶಾಸಕ ಅಮರೇಗೌಡ ಪಾಟೀಲ ಅಧ್ಯಕ್ಷತೆಯಲ್ಲಿ ನಡೆದ ಲಾಕ್‌ಡೌನ್ ಸಡಿಲಿಕೆ ಕ್ರಮ, ಸರಳೀಕರಣ ನಿರ್ವಹಣೆ ಕುರಿತ ಸಭೆಯಲ್ಲಿ ಬೆಳಗ್ಗೆ 6ರಿಂದ 10ಗಂಟೆಯ4 ತಾಸಿನ ವಹಿವಾಟಿಗೆ ಸಮ್ಮತಿಸಿತ್ತು. ಗುರುವಾರ ಬೆಳಗ್ಗೆ ಭಾಗಶಃ ಅಂಗಡಿಗಳು ಆರಂಭಗೊಂಡವು. ಕೆಲ ಅಂಗಡಿಗಳು ಪುರಸಭೆ ಟ್ರೇಡ್ ಲೈಸೆನ್ಸ್ ಕಡ್ಡಾಯವಾಗಿದ್ದರಿಂದ ಪುರಸಭೆಯವರು ಅಂಗಡಿ ಬಂದ್ ಮಾಡಿಸಿದರು.
ಲಾಕ್‌ಡೌನ್ ಸಡಿಲಿಕೆ ವ್ಯಾಪಾರಸ್ಥರಿಗೆ ಬಿಸಿ ತುಪ್ಪವಾಗಿದೆ. ಕೊರೊನಾ ಹಾವಳಿ ತಗ್ಗುವವರೆಗೂ ಟ್ರೇಡ್ ಲೈಸೆನ್ಸ್ ಬೇಡ ಎನ್ನುವುದು ವ್ಯಾಪಾರಸ್ಥರ ನಿವೇದನೆಯಾಗಿದೆ.