ಕೊಪ್ಪಳ:ಲಾಕ್ಡೌನ್ ಆದೇಶ ಉಲ್ಲಂಘಿಸಿ ವ್ಯಾಪಾರ ವಹಿವಾಟು ನಡೆಸಿದ ಮೂರು ಜನ ವರ್ತಕರ ಮೇಲೆ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಲಾಕ್ಡೌನ್ ಆದೇಶ ಉಲ್ಲಂಘನೆ: ಮೂವರು ವರ್ತಕರ ವಿರುದ್ಧ ಎಫ್ಐಆರ್ - ನಗರ ಠಾಣೆ
ಕೊಪ್ಪಳ ನಗರದ ಮಹಾವೀರ ವೃತ್ತದ ಒಎಸ್ಬಿ ರಸ್ತೆಯಲ್ಲಿ ಲಾಕ್ಡೌನ್ ಆದೇಶ ಉಲ್ಲಂಘಿಸಿ ವ್ಯಾಪಾರ ವಹಿವಾಟು ನಡೆಸಿದ ಮೂರು ಜನ ವರ್ತಕರ ವಿರುದ್ಧ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಲಾಕ್ಡೌನ್ ಆದೇಶ ಉಲ್ಲಂಘನೆ..ಮೂವರು ವರ್ತಕರ ಮೇಲೆ ಎಫ್ಐಆರ್
ನಗರದ ಮಹಾವೀರ ವೃತ್ತದ ಒಎಸ್ಬಿ ರಸ್ತೆಯಲ್ಲಿರುವ ವಿಶಾಲ್ ಟೆಕ್ಸ್ಟೈಲ್ ಮಾಲೀಕ ಅಶೋಕ್ ಜೈನ್, ಬಟ್ಟೆ ವ್ಯಾಪಾರಿ ಹುಸೇನ್ ಸಾಬ ಹಾಗೂ ಕಿರಾಣಿ ಅಂಗಡಿ ವರ್ತಕ ವೆಂಕಟಗಿರಿಯ ಮಂಜುನಾಥ ಹುಲುಗಪ್ಪ ಎಂಬುವರ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳನ್ನ ವಶಕ್ಕೆ ಪಡೆದುಕೊಂಡ ಪೊಲೀಸರು, ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.