ಕರ್ನಾಟಕ

karnataka

ETV Bharat / state

ನ್ಯಾಯಯುತ ಬೆಲೆ ಸಿಗದೆ ಕುರಿ ಬಿಟ್ಟು ಈರುಳ್ಳಿ ಮೇಯಿಸಿದ ರೈತ - ಕೊಪ್ಪಳ ಈರುಳ್ಳಿ ಬೆಳೆ

ಕೊರನಾ ಭೀತಿ ಹಾಗೂ ಲಾಕ್ ಡೌನ್ ಎಫೆಕ್ಟ್ ಎಲ್ಲ ಕ್ಷೇತ್ರದ ಮೇಲೂ ಕರಿ ನೆರಳು ಬೀರಿದೆ. ಅದರಲ್ಲಿಯೂ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ರೈತರ ಬೆಳೆ ಕೈಗೆ ಬಂದಿದ್ದರೂ ಅದನ್ನು ಮಾರಾಟ ಮಾಡಲಾಗದೆ ಸಂಕಷ್ಟಕ್ಕೆ ಸಿಲುಕಿದ್ದು ಇಲ್ಲೊಬ್ಬ ರೈತ ಬೆಳೆದ ಬೆಳೆಗೆ ಕುರಿ ಬಿಟ್ಟು ಮೇಯಿಸಿದ್ದಾನೆ.

goat
ಕುರಿ

By

Published : Apr 13, 2020, 10:29 AM IST

ಕೊಪ್ಪಳ: ಖರೀದಿದಾರರು ಕಡಿಮೆ ಬೆಲೆಗೆ ಕೇಳಿದ್ದರಿಂದ ನೊಂದ ರೈತನೊಬ್ಬ ತಾನು ಮೂರು ಎಕರೆಯಲ್ಲಿ ಬೆಳೆದಿದ್ದ ಈರುಳ್ಳಿಯನ್ನು ಕುರಿ ಬಿಟ್ಟು ಮೇಯಿಸಿದ್ದಾನೆ.

ಕುರಿ ಬಿಟ್ಟು ಬೆಳೆ ಮೇಯಿಸಿದ ರೈತ

ಕೊಪ್ಪಳ ತಾಲೂಕಿನ ಮೋರನಾಳ ಗ್ರಾಮದ ರೈತ ರಾಮಣ್ಣ ಹಾಲವರ್ತಿ ಎಂಬುವವರು ತಮ್ಮ ಜಮೀನಿನಲ್ಲಿ ಬೆಳೆದಿದ್ದ ಈರುಳ್ಳಿಯನ್ನು ಕುರಿ ಬಿಟ್ಟು ಮೇಯಿಸಿದ್ದಾರೆ.

ಕೊರೊನಾ ಎಫೆಕ್ಟ್ ನಿಂದ ಬೆಳೆಗೆ ಬೆಲೆ ಇಲ್ಲದಂತಾಗಿದೆ. ಖರೀದಿದಾರರು ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ. ಆ ಬೆಲೆಗೆ ಕೊಟ್ಟರೆ ನಮಗೆ ಇನ್ನಷ್ಟು ನಷ್ಟವಾಗುತ್ತದೆ. ಹೀಗಾಗಿ, ಬೆಳೆಯನ್ನು ಕುರಿ ಬಿಟ್ಟು ಮೇಯಿಸಿರುವುದಾಗಿ ಈಟಿವಿ ಭಾರತಕ್ಕೆ ರೈತ ರಾಮಣ್ಣ ತಿಳಿಸಿದ್ದಾರೆ.

ABOUT THE AUTHOR

...view details