ಕೊಪ್ಪಳ: ನಗರದಲ್ಲಿ ಸುಮಾರು 600ಕ್ಕೂ ಹೆಚ್ಚು ಪ್ಯಾಸೆಂಜರ್ ಆಟೋಗಳು ಇವೆ. ಸದ್ಯ ಲಾಕ್ಡೌನ್ ಎಫೆಕ್ಟ್ನಿಂದ ಈ ಆಟೋಗಳೆಲ್ಲವೂ ರಸ್ತೆಗಿಳಿಯದೇ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಲಾಕ್ಡೌನ್: ತಿಂಗಳಿನಿಂದ ಆದಾಯವಿಲ್ಲದೇ ಆಟೋ ಚಾಲಕರ ಬದುಕು ಬರ್ಬಾದ್ - ಕೊರೊನಾ ಕರಿನೆರಳು
ಕೊರೊನಾ ಎಲ್ಲಾ ಕ್ಷೇತ್ರಗಳ ಮೇಲೂ ಪರಿಣಾಮ ಬೀರಿದೆ. ಅದರಲ್ಲೂ ಆಟೋ ಚಾಲಕರ ಸ್ಥಿತಿಯಂತೂ ಹೇಳತೀರದಾಗಿದ್ದು, ದುಡಿಯವ ಕೈಗಳಿಗೆ ಕೆಲಸವಿಲ್ಲದೆ ಕುಟುಂಬ ನಿರ್ವಹಣೆ ಕಷ್ಟವಾಗಿದೆ.
ಕೊರೊನಾ ಎಲ್ಲಾ ಕ್ಷೇತ್ರಗಳ ಮೇಲೂ ಪರಿಣಾಮ ಬೀರಿದೆ. ಅದರಲ್ಲೂ ಆಟೋ ಚಾಲಕರ ಸ್ಥಿತಿಯಂತೂ ಹೇಳತೀರದಾಗಿದ್ದು, ದುಡಿಯವ ಕೈಗಳಿಗೆ ಕೆಲಸವಿಲ್ಲದೆ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಆಟೋ ಓಡಿಸಿ ನಿತ್ಯ 200-300 ರೂ. ದುಡಿಮೆ ಮಾಡಿಕೊಂಡು ಬದುಕಿನ ಬಂಡಿ ನಡೆಸುತ್ತಿದ್ದವರು ಈಗ ನಯಾ ಪೈಸೆ ದುಡಿಮೆಯಿಲ್ಲದೆ ಬೀದಿಗೆ ಬೀಳುವ ಪರಿಸ್ಥಿತಿ ಎದುರಾಗಿದೆ ಎಂದು ಆಟೋ ಚಾಲಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಸರ್ಕಾರ ಅಕ್ಕಿ, ಗೋಧಿ ನೀಡಿದೆ. ಆದರೆ ಉಳಿದ ಖರ್ಚಿಗೆ ಹಣವಿಲ್ಲದಂತಾಗಿದೆ. ಈ ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಬೀದಿಗೆ ಬೀಳುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನುತ್ತಿದ್ದಾರೆ.