ಗಂಗಾವತಿ (ಕೊಪ್ಪಳ): 8 ವರ್ಷದ ಹೆಣ್ಣು ಮಗುವನ್ನು ಅಪಹರಿಸಲು ಯತ್ನಿಸಿದ ಘಟನೆ ನಗರದ ಲಿಂಗರಾಜ್ ಕ್ಯಾಂಪಿನ ಮಟ್ಟಿ ಆಸ್ಪತ್ರೆಯ ಬಳಿ ನಡೆದಿದೆ. ಆರೋಪಿಯನ್ನು ಸ್ಥಳಿಯರು ಬೆನ್ನಟ್ಟಿ ಹಿಡಿದು ಧರ್ಮದೇಟು ಕೊಟ್ಟಿದ್ದಾರೆ.
ಮಗುವನ್ನು ಅಪಹರಿಸಲು ಯತ್ನ: ಸಿಕ್ಕಿಬಿದ್ದ ಖದೀಮನಿಗೆ ಸಖತ್ ಗೂಸಾ
ಹಾಡಹಗಲಲ್ಲೇ ಮಗುವನ್ನು ಅಪಹರಿಸಲು ಯತ್ನಿಸಿದ ಆರೋಪಿಯನ್ನು ಸ್ಥಳಿಯರೇ ಹಿಡಿದು ಗೂಸಾ ನೀಡಿದ್ದಾರೆ. 8 ವರ್ಷದ ಮಗುವನ್ನು ಎತ್ತಿಕೊಂಡು ಓಡುವಾಗ ಯುವಕರು ಬೆನ್ನಟ್ಟಿದ್ದು, ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.
ಮಗುವನ್ನು ಅಪಹರಿಸಲು ಯತ್ನ: ಸಿಕ್ಕಿಬಿದ್ದ ಖದೀಮನಿಗೆ ಸಖತ್ ಗೂಸಾ
ಬಳಿಕ ನಗರಠಾಣೆಗೆ ಕೆರೆತಂದು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಂಧಿತ ಆರೋಪಿಯನ್ನು ಕೊಟ್ಟೂರೇಶ್ವರ ಕ್ಯಾಂಪ್ನ ನಿವಾಸಿ ಪ್ರವೀಣ ಎಂದು ಗುರುತಿಸಲಾಗಿದೆ.
ಮಹಮ್ಮದ್ ಮೇಸ್ತ್ರಿ ಎಂಬುವರ 8 ವರ್ಷದ ಹೆಣ್ಣು ಮಗು ಮನೆಯ ಮುಂದಿನ ಆವರಣದಲ್ಲಿ ಆಟವಾಡುತ್ತಿರುವಾಗ ಹೊಂಚು ಹಾಕಿದ ಆರೋಪಿ, ಮಗುವನ್ನು ಅಪಹರಿಸಿ ಸುಮಾರು 150 ಮೀಟರ್ ಓಡಿದ್ದಾನೆ. ಆದರೆ ಸ್ಥಳಿಯ ಯುವಕರು ಆರೋಪಿಯ ಬೆನ್ನು ಹತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.