ಕುಷ್ಟಗಿ: ಸಾಹಿತ್ಯ ವಯಸ್ಸಾದವರಿಗೆ ಸೀಮಿತವಾಗಿಲ್ಲ. ಅದು ಸರ್ವರಿಗಾಗಿ ಇದ್ದು, ಯುವ ಪೀಳಿಗೆ ಇದನ್ನು ಅರ್ಥೈಸಿಕೊಳ್ಳದೇ ಸಾಹಿತ್ಯ ಹಾಗೂ ಓದುವ ಅಭಿರುಚಿಯಿಂದ ವಿಮುಖರಾಗುತ್ತಿದ್ದಾರೆ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಕಳವಳ ವ್ಯಕ್ತಪಡಿಸಿದರು.
ಶ್ರೀ ಓಂಕಾರೇಶ್ವರ ದೇವಸ್ಥಾನದ ಆವರಣದಲ್ಲಿ ಕನ್ನಡ ಭವನದ ಲಿಂ. ಶ್ರೀ ಶಶಿಧರಸ್ವಾಮಿ ವೇದಿಕೆಯಲ್ಲಿ ನಡೆದ 12ನೇ ತಾಲೂಕಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.