ಕರ್ನಾಟಕ

karnataka

ETV Bharat / state

ಕೊಪ್ಪಳದಲ್ಲಿ ಮದ್ಯದಂಗಡಿ ಕಳ್ಳತನ: ಪ್ರಕರಣ ದಾಖಲು - liquor store

ಕೊಪ್ಪಳದ ಶ್ರೀ ಸಾಯಿ ಟ್ರೇಡರ್ಸ್​ ಬಾರ್​​ನಲ್ಲಿ ಕಳ್ಳತನವಾಗಿದೆ. ಸುಮಾರು 50 ಸಾವಿರ ರುಪಾಯಿಗೂ ಹೆಚ್ಚು ಮೌಲ್ಯದ ಮದ್ಯವನ್ನು ಕಳ್ಳರು ಹೊತ್ತೊಯ್ದಿದ್ದಾರೆ.

ಕೊಪ್ಪಳದಲ್ಲಿ ಮದ್ಯದಂಗಡಿ ಕಳ್ಳತನ
ಕೊಪ್ಪಳದಲ್ಲಿ ಮದ್ಯದಂಗಡಿ ಕಳ್ಳತನ

By

Published : Apr 5, 2020, 4:29 PM IST

ಕೊಪ್ಪಳ: ಜಿಲ್ಲೆಯ ಎಪಿಎಂಸಿ ಬಳಿಯ ಶ್ರೀ ಸಾಯಿ ಟ್ರೇಡರ್ಸ್​ ಬಾರ್​​ನಲ್ಲಿ ಕಳ್ಳತನವಾಗಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬಾರ್​​​ನ ಹಿಂಬಾಗಿಲು ಮುರಿದು ಮದ್ಯ ಕಳ್ಳತನ ಮಾಡಿ ಕಳ್ಳರು ಪರಾರಿಯಾಗಿದ್ದಾರೆ.

ಕೊಪ್ಪಳದಲ್ಲಿ ಮದ್ಯದಂಗಡಿ ಕಳ್ಳತನ

ಕೊರೊನಾ ಭೀತಿಯಿಂದ ಲಾಕ್​​ಡೌನ್ ಆದ ಹಿನ್ನೆಲೆಯಲ್ಲಿ ನಗರದಲ್ಲಿ ಎಲ್ಲ ಮದ್ಯದ ಅಂಗಡಿಗಳು ಬಂದ್ ಆಗಿವೆ. ಮದ್ಯ ಸಿಗದಿರುವ ಕಾರಣಕ್ಕೆ ಕುಡುಕರು ಕಳ್ಳತನ ಮಾಡಿದ್ದಾರೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ನಗರ ಠಾಣೆ ಪೊಲೀಸರು ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೊಪ್ಪಳದಲ್ಲಿ ಮದ್ಯದಂಗಡಿ ಕಳ್ಳತನ

ABOUT THE AUTHOR

...view details