ಗಂಗಾವತಿ: ನಾಳೆಯಿಂದ ರಾಜ್ಯಾದ್ಯಂತ ಮದ್ಯ ಮಾರಾಟಕ್ಕೆ ಅನುಮತಿ ನೀಡಿದ ಹಿನ್ನೆಲೆ ಅಂಗಡಿ ಮಾಲೀಕರು ಮದ್ಯ ಮಾರಾಟಕ್ಕೆ ಭರ್ಜರಿ ತಯಾರಿ ನಡೆಸಿದ್ದಾರೆ.
ಗಂಗಾವತಿ: ನಾಳೆಯಿಂದ ಮದ್ಯದಂಗಡಿ ತೆರೆಯಲು ಅಂಗಡಿ ಮಾಲೀಕರ ಸಿದ್ಧತೆ - ಮದ್ಯದಂಗಡಿ ಓಪನ್
ಮೇ 4ರಿಂದ ಆಯ್ದ ಮದ್ಯದ ಅಂಗಡಿಗಳಲ್ಲಿ ಗ್ರಾಹಕರಿಗೆ ಎಣ್ಣೆ ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗಿದೆ. ಅಬಕಾರಿ ಇಲಾಖೆಯ ಅಧಿಕಾರಿಗಳು ಈ ಮೊದಲು ಇದ್ದ ದಾಸ್ತಾನು ಪರಿಶೀಲಿಸಿ ನಂತರ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಲಿದ್ದಾರೆ ಎಂದು ತಿಳಿದು ಬಂದಿದೆ.
ನಾಳೆಯಿಂದ ಮದ್ಯದಂಗಡಿ ತೆರೆಯಲು ಅಂಗಡಿ ಮಾಲೀಕರ ಸಿದ್ಧತೆ
ಆಯ್ದ ಮದ್ಯದ ಅಂಗಡಿಗಳಲ್ಲಿ ಗ್ರಾಹಕರಿಗೆ ಎಣ್ಣೆ ಸರಬರಾಜು ಮಾಡಲು ಈಗಾಗಲೇ ವ್ಯವಸ್ಥೆ ಮಾಡಲಾಗಿದ್ದು, ಅಬಕಾರಿ ಇಲಾಖೆಯ ಅಧಿಕಾರಿಗಳು ಈ ಮೊದಲು ಇದ್ದ ದಾಸ್ತಾನು ಪರಿಶೀಲಿಸಿದ ಬಳಿಕವಷ್ಟೇ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಲಿದ್ದಾರೆ ಎನ್ನಲಾಗಿದೆ.
ಇನ್ನು ನಗರದಲ್ಲಿನ ಬಹುತೇಕ ಅಂಗಡಿಗಳ ಮುಂದೆ ಸಾಮಾಜಿಕ ಅಂತರ ಕಾಪಾಡಿಕೊಂಡು ಗ್ರಾಹಕರಿಗೆ ಮದ್ಯ ನೀಡಲು ಸಿದ್ಧತೆ ಮಾಡಲಾಗಿದೆ.