ಕೊಪ್ಪಳ: ಯಲಬುರ್ಗಾ ತಾಲೂಕಿನ ಚಿಕ್ಕಮ್ಯಾಗೇರಿಯಲ್ಲಿ ಕೂಲಿ ಕೆಲಸಕ್ಕೆ ತೆರಳಿದ್ದ ಇಬ್ಬರು ಮಹಿಳೆಯರಿಗೆ ಸಿಡಿಲು ಬಡಿದು ಸಾವಿಗೀಡಾಗಿದ್ದಾರೆ. ಚಿಕ್ಕಮ್ಯಾಗೇರಿಯ ಐದು ಜನ ಮಹಿಳೆಯರು ಲಕಮನಗುಳೆ ಬಳಿ ಇದ್ದ ಹೊಲಕ್ಕೆ ಕಳೆ ತೆಗೆಯಲು ಹೋಗಿದ್ದರು. ಮಳೆ ಬರುವ ಮುನ್ಸೂಚನೆ ಕಂಡು ಮಾವಿನ ಮರದಡಿ ಕುಳಿತಿದ್ದಾರೆ. ಆ ಸಂದರ್ಭದಲ್ಲಿ ಸಿಡಿಲು ಬಡಿದು ಈ ದುರ್ಘಟನೆ ಸಂಭವಿಸಿದೆ.
ಕೊಪ್ಪಳ: ಸಿಡಿಲು ಬಡಿದು ಇಬ್ಬರು ಮಹಿಳೆಯರು ಸಾವು, ಮೂವರಿಗೆ ಗಂಭೀರ ಗಾಯ - ಕೊಪ್ಪಳ
ಹೊಲದ ಕೆಲಸಕ್ಕೆ ಹೋಗಿದ್ದ ಇಬ್ಬರು ಮಹಿಳೆಯರಿಗೆ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಮೂವರು ಗಾಯಗೊಂಡಿದ್ದು, ತಾಲೂಕಿನ ಆಸ್ಪತ್ರೆಗೆ ಸೇರಿಸಲಾಗಿದೆ.
![ಕೊಪ್ಪಳ: ಸಿಡಿಲು ಬಡಿದು ಇಬ್ಬರು ಮಹಿಳೆಯರು ಸಾವು, ಮೂವರಿಗೆ ಗಂಭೀರ ಗಾಯ lightning strikes](https://etvbharatimages.akamaized.net/etvbharat/prod-images/768-512-15481388-thumbnail-3x2-bng.jpg)
ಸಿಡಿಲು ಬಡಿದು ಇಬ್ಬರ ಸಾವು
ದೇವಮ್ಮ(52) ಮತ್ತು ರೇಷ್ಮಾ (27) ಎಂಬಿಬ್ಬರು ಸಾವಿಗೀಡಾಗಿದ್ದು, ಇನ್ನುಳಿದ ಮೂವರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನ ಯಲಬುರ್ಗಾ ತಾಲೂಕು ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕೆತ್ಸೆಗಾಗಿ ದಾಖಲಿಸಲಾಗಿದೆ. ಆಸ್ಪತ್ರೆ ಆವರಣದಲ್ಲಿ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಯಲಬುರ್ಗಾ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
ಇದನ್ನೂ ಓದಿ:ಬಾಲಕನ ಮೇಲೆರಗಿದ ಜೆಸಿಬಿ: ಕೊಕ್ಕೆಯಿಂದ ಮೃತದೇಹ ಪಕ್ಕಕ್ಕೆ ಸರಿಸಿದ ಚಾಲಕನಿಗೆ ಗೂಸಾ